Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮೀ ಕೊಲೆ ಹಿಂದೆ ಆಶ್ರಫ್ ಕೈವಾಡವಿದೆ ಎಂದ ಪತಿ

Bangalore Mahalakshmi No More

Sampriya

ಬೆಂಗಳೂರು , ಭಾನುವಾರ, 22 ಸೆಪ್ಟಂಬರ್ 2024 (18:13 IST)
ಬೆಂಗಳೂರು: ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣ ಸಂಬಂಧ ಆಕೆಯ ಪತಿ ಹೇಮಂತ್ ಅವರು ಆಶ್ರಫ್ ಎಂಬಾತನ ಮೇಲೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ನಿ ಕೊಲೆ ಬಗ್ಗೆ ಇಂದು ಮಾಧ್ಯಮಗಳ ಬಳಿ ಮಾತನಾಡಿದ ಹೇಮಂತ್ ದಾಸ್ ಅವರು, ಮಹಾಲಕ್ಷ್ಮೀ ಕಳೆದ ವರ್ಷದಿಂದ ಆಶ್ರಫ್‌ ಎಂಬಾತನ ಜತೆ ಸಂಪರ್ಕದಲ್ಲಿರುವುದು ಗೊತ್ತಿತ್ತು. ಈ ಬಗ್ಗೆ ಆಕೆಗೆ ಬುದ್ಧಿವಾದ ಹೇಳಿ, ಅಶ್ರಫ್ ವಿರುದ್ಧ ದೂರನ್ನು ನೀಡಿದ್ದೆ. ಆ ನಂತರ ನನಗೆ ಆತನ ಜತೆ  ಸಂಪರ್ಕವಿರಲಿಲ್ಲ. ಈ ಸಂಬಂಧ ಮತ್ತೇ ನಮ್ಮಿಬ್ಬರ ಮಧ್ಯೆ ಭಿನ್ನಾಬಿಪ್ರಾಯ ಹುಟ್ಟಿಕೊಳ್ಳಿತು. ಮಹಾಲಕ್ಷ್ಮೀ ನನ್ನ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಳು. ಆದಾದ ಮೇಲೆ ಕಳೆದ 9ತಿಂಗಳಿನಿಂದ ಆಕೆ ಬೆಂಗಳೂರಿಗೆ ಬಂದು ಒಬ್ಬಂಟಿಯಾಗಿ ನೆಲೆಸಿದ್ದಳು. ನಾಲ್ಕು ತಿಂಗಳು ಮಗು ಆಕೆಯ ಜತೆಗಿತ್ತು. ಕಳೆದ 5 ತಿಂಗಳಿನಿಂದ ಮಗನನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದರು.

ಮಹಾಲಕ್ಷ್ಮೀ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಮನೆ ಮಾಲೀಕರು ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಹಾಲಕ್ಷ್ಮೀ ಅಕ್ಕನಿಗೆ ಮಾಹಿತಿ ನೀಡಿದ್ದೆ. ಅವರು ಬಂದು ಬಾಗಿಲು ತೆರೆದು ನೋಡಿದಾಗ ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ತುಂಗಭದ್ರಾ ಜಲಾಶಯಕ್ಕೆ ವರ್ಷದೊಳಗೆ ಹೊಸ ಕ್ರಸ್ಟ್‌ ಗೇಟ್‌ ಅಳವಡಿಸುತ್ತೇವೆ: ಡಿಕೆ ಶಿವಕುಮಾರ್‌