Publish Date: Sat, 03 Jan 2026 (10:01 IST)
Updated Date: Sat, 03 Jan 2026 (10:04 IST)
ಭೋಪಾಲ್: ನಾವು ಬಿಜೆಪಿಯ ರಿಮೋಟ್ ಕಂಟ್ರೋಲ್ ಅಲ್ಲ. ಬಿಜೆಪಿ ಸ್ವತಂತ್ರವಾಗಿ ಕೆಲಸ ಮಾಡುತ್ತದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ರಿಮೋಟ್ ಕಂಟ್ರೋಲ್ ಆರ್ ಎಸ್ಎಸ್ ಎಂದು ಯಾವತ್ತೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕಿಸುತ್ತಲೇ ಇರುತ್ತವೆ. ಇದೀಗ ಆ ಪಕ್ಷಗಳಿಗೆ ಮೋಹನ್ ಭಾಗವತ್ ಈ ರೀತಿ ಉತ್ತರ ನೀಡಿದ್ದಾರೆ. ಬಿಜೆಪಿ, ವಿಎಚ್ ಪಿ, ವಿದ್ಯಾ ಭಾರತದಂತಹ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತವೆ. ಇದು ಯಾವುದೂ ಆರ್ ಎಸ್ಎಸ್ ನಿಯಂತ್ರಣದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.
ಆರ್ ಎಸ್ಎಸ್ ನ್ನು ಅರ್ಥ ಮಾಡಿಕೊಳ್ಳಲು ವಿಕಿಪಿಡೀಯಾದಲ್ಲಿ ಹುಡಕಬೇಡಿ. ಬಿಜೆಪಿ, ವಿಎಚ್ ಪಿ ಮೂಲಕ ಆರ್ ಎಸ್ಎಸ್ ನ್ನು ಅರ್ಥಮಾಡಿಕೊಳ್ಳಲ ಪ್ರಯತ್ನ ಮಾಡಬೇಡಿ. ಆರ್ ಎಸ್ಎಸ್ ಅರ್ಥ ಮಾಡಿಕೊಳ್ಳಬೇಕು ಎಂದರೆ ಅದರಲ್ಲಿ ಸೇರಿ ಕೆಲಸ ಮಾಡಿ ಎಂದಿದ್ದಾರೆ.
ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡುವ ನಮ್ಮ ಮತ್ತು ಬಿಜೆಪಿ, ವಿಎಚ್ ಪಿ ಗುರಿಗಳು ಒಂದೇ ಆಗಿರಬಹುದು. ಆದರೆ ಅವರನ್ನು ನಾವು ನಿಯಂತ್ರಿಸುತ್ತಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.