ಬೆಂಗಳೂರು: ಚುನಾವಣೆಗೂ ಮುನ್ನ ನಂದಿನಿ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಟೂಲ್‌ಕಿಟ್ ಪ್ರಚಾರ ಪಡೆದ ಕರ್ನಾಟಕ ಕಾಂಗ್ರೆಸ್ ಇದೀಗ ನಂದಿನಿಯನ್ನು ಸಂಪೂರ್ಣ ಮುಗಿಸಲು ಹೊರಟಿದೆ ಎಂದು ಬಿಜೆಪಿ ಸರ್ಕಾರ ಆರೋಪಿಸಿದೆ.
ದಿಢೀರ್ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿ ಬಿಜೆಪಿ ಪೋಸ್ಟ್ ಮಾಡಿದೆ.
ನಂದಿನಿ ತುಪ್ಪ ಪ್ರತಿ ಲೀಟರ್‌ಗೆ ₹90 ಏರಿಕೆ
ನಂದಿನಿ ಬೆಣ್ಣೆ ಪ್ರತಿ ಕೆಜಿಗೆ ₹26 ಏರಿಕೆ
ಕೈ" ಒಣ ರಾಜಕೀಯಕ್ಕೆ ಕೇರಳದಲ್ಲೂ ನಂದಿನಿ ಬಲಿ
ಪಶು ಆಹಾರ ದರ ಶೇ. 30ರಷ್ಟು ಹೆಚ್ಚಳ
ಹಾಲಿನ ದರ ರೈತರಿಗೆ ಕಡಿತ, ಗ್ರಾಹಕರಿಗೆ ಹೆಚ್ಚಳ
ರಾಜ್ಯಾದ್ಯಂತ ರೈತರಿಗೆ ಪ್ರತಿನಿತ್ಯವೂ ₹30 ಲಕ್ಷದಷ್ಟು ಮೋಸ
ಹೈನುಗಾರರಿಂದ ವರ್ಷಕ್ಕೆ ₹1,000 ಕೋಟಿ ಲೂಟಿ ಗುರಿ
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿದ್ದ ನಂದಿನಿ ಮಳಿಗೆಗಳು ಎತ್ತಂಗಡಿ
ಹೈನುಗಾರಿಕೆಗೆ ಹೊಡೆತ, ಗೋಹತ್ಯೆಗೆ ಪ್ರೋತ್ಸಾಹ
ಹಾಲಿನ ಉತ್ಪನ್ನ ಮಾರುಕಟ್ಟೆ ವಿಸ್ತರಣೆಗಿಲ್ಲ ಪ್ರಯತ್ನ
ಬೆಲೆ ಏರಿಕೆಯ ಮೂಲಕ ಗ್ರಾಹಕರಿಂದ ದೂರ ಸರಿಯುತ್ತಿದೆ ನಂದಿನಿ.