ತುಮಕೂರು: ಈದ್ಗಾ ಸಂದರ್ಭದಲ್ಲಿ ಮೈದಾನ, ರಸ್ತೆಯಲ್ಲಿ ನಮಾಜ್ ಮಾಡಲು ಮುಸ್ಲಿಂರು ಅನುಮತಿ ಪಡೆಯುತ್ತಾರಾ ಎಂದು ಶಾಸಕ ಕೆಎನ್ ರಾಜಣ್ಣ ಅವರು ಪ್ರಶ್ನೆ ಮಾಡಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಜ್ ಮಾಡಿದರೆ ತಡೆಯುವ ಶಕ್ತಿ ಇದೆಯೇ? ಅನುಮತಿ ಕೊಡಿ ಎಂದು ಅವರು ಬರುತ್ತಾರೆಯೇ? ಅನುಮತಿ ತೆಗೆದುಕೊಳ್ಳಿ ಎಂದು ನಾವು ಹೇಳುತ್ತೇವೆಯೆ ಎಂದು ಪ್ರಶ್ನೆ ಹಾಕಿದ್ದಾರೆ.
ಅವರು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಮಾಡಿರುವ ಸಂಬಂಧ ಪ್ರತಿಕ್ರಿಯಿಸಿದರು.
ಜಾರಿ ಮಾಡಲು ಸಾಧ್ಯವಾಗುವ ಕಾನೂನು ಜಾರಿಗೆ ತಂದರೆ ಅದು ಜಾರಿಯಲ್ಲಿರುತ್ತದೆ. ಇಲ್ಲದಿದ್ದರೆ ಅದು ಪುಸ್ತಕದಲ್ಲಿರುತ್ತದೆ. ಹೊಸ ನಿಯಮ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.