Select Your Language

Notifications

webdunia
webdunia
webdunia
webdunia

ಮುಸ್ಲಿಮರಿಗೆ ಇಷ್ಟವಾಗಲ್ಲ ಎಂದು ವಂದೇಮಾತರಂ ಕಡಿತಗೊಳಿಸಿದ್ದು ಜವಹರಲಾಲ್ ನೆಹರು: ಬಿಜೆಪಿ ಆರೋಪ

Jawaharlal Nehru

Krishnaveni K

ನವದೆಹಲಿ , ಶುಕ್ರವಾರ, 7 ನವೆಂಬರ್ 2025 (14:41 IST)
Photo Credit: X
ನವದೆಹಲಿ: ಇಂದು ರಾಷ್ಟ್ರೀಯ ಹಾಡು ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಸಿಆರ್ ಕೇಶವನ್, ಮುಸ್ಲಿಮರಿಗೆ ಇಷ್ಟವಾಗಲ್ಲ ಎಂಬ ಕಾರಣಕ್ಕೆ ಕೆಲವು ಸಾಲುಗಳನ್ನು ಜವಹರಲಾಲ್ ನೆಹರೂ ಕತ್ತರಿ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

1937 ರಲ್ಲಿ ನೆಹರೂ ನಾಯಕತ್ವದಲ್ಲಿ ಕಾಂಗ್ರೆಸ್ ಬಹುದೊಡ್ಡ ಅಪರಾಧ ಮಾಡಿತು. ವಂದೇ ಮಾತರಂ ಹಾಡಿನಲ್ಲಿ ದುರ್ಗಾ ಮಾತೆಯನ್ನು ಹೊಗಳಿ ಇರುವ ಸಾಲುಗಳಿವೆ. ಇದು ಮುಸ್ಲಿಮರಿಗೆ ಇಷ್ಟವಾಗಲ್ಲ ಎಂಬ ಕಾರಣಕ್ಕೆ ಹಾಡಿಗೇ ಕತ್ತರಿ ಹಾಕಿದರು ಎಂದು ಕೇಶವನ್ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ.

ನೇತಾಜಿ ಸುಭಾಷ್ ಚಂದ್ರಬೋಸ್ ಅವರಿಗೆ ವಂದೇ ಮಾತರಂ ಹಾಡನ್ನು ಪೂರ್ತಿಯಾಗಿ ಬಳಸಬೇಕು ಎಂದು ಆಸೆಯಿತ್ತು. ಆದರೆ ನೆಹರೂ ಅದಕ್ಕೆ ಅವಕಾಶ ಕೊಡಲಿಲ್ಲ. ವಂದೇ ಮಾತರಂ ರಾಷ್ಟ್ರಗೀತೆ ಆಗುವುದಕ್ಕೆ ಸೂಕ್ತವಲ್ಲ ಎಂದರು. ನೆಹರೂ ಅವರು ಹಿಂದೂ ವಿರೋಧಿ ಭಾವನೆ ಹೊಂದಿದ್ದರು. ಈಗ ರಾಹುಲ್ ಗಾಂಧಿಯವರೂ ಅದೇ ಭಾವನೆ ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ ಚುನಾವಣೆ ಫಲಿತಾಂಶ ದಿನವೇ ವಿದೇಶಕ್ಕೆ ಹಾರಲಿರುವ ರಾಹುಲ್ ಗಾಂಧಿ: ತಿಂಗಳಂತ್ಯದವರೆಗೂ ಫಾರಿನ್ ಟೂರ್