Select Your Language

Notifications

webdunia
webdunia
webdunia
webdunia

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

Shivaraj Singh Chouhan

Krishnaveni K

ನವದೆಹಲಿ , ಮಂಗಳವಾರ, 20 ಮೇ 2025 (10:32 IST)
ನವದೆಹಲಿ: ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.

ರೈತರನ್ನುದ್ದೇಶಿಸಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಈ ಆರೋಪ ಮಾಡಿದ್ದಾರೆ. ನೆಹರೂ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿ ದೊಡ್ಡ ತಪ್ಪು ಮಾಡಿದ್ದಷ್ಟೇ ಅಲ್ಲ ಪಾಕಿಸ್ತಾನಕ್ಕೆ ಹಣವನ್ನೂ ಕೊಟ್ಟಿದ್ದರು ಎಂದಿದ್ದಾರೆ.

ಅಂದಿನ ಕಾಲಕ್ಕೆ ನೆಹರೂ ಪಾಕಿಸ್ತಾನಕ್ಕೆ 83 ಕೋಟಿ ರೂ.ಗಳ ಹಣವನ್ನೂ ಕೊಟ್ಟಿದ್ದರು. ಇದರ ಇಂದಿನ ಮೌಲ್ಯ ಸುಮಾರು 5,500 ಕೋಟಿ ರೂ.ಗಳಷ್ಟು. ನೀರಿನ ಜೊತೆಗೆ ಪಾಕಿಸ್ತಾನದಲ್ಲಿ ಕಾಲುವೆ ನಿರ್ಮಾಣ ಮಾಡಲೂ ಭಾರತವೇ ಹಣ ನೀಡಿತ್ತು. ನಮ್ಮ ರೈತರ ಹಿತಾಸಕ್ತಿಯನ್ನು ಪಣಕ್ಕಿಟ್ಟು ನಾವು ಪಾಕಿಸ್ತಾನಕ್ಕೆ ನೀರು ಕೊಟ್ಟೆವು. ಆದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಉಗ್ರರನ್ನು ಪೋಷಿಸಿತು. ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸಂಸತ್ ನಲ್ಲಿಯೇ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ವಿರೋಧಿಸಿದ್ದರು ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮಳೆಯಲ್ಲಿ ಮುಳುಗಿರುವಾಗ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ