ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಈಗ ಶತ್ರುರಾಷ್ಟ್ರ ಅಮೆರಿಕಾಗೆ ಮೊರೆಯಿಡುತ್ತಿದೆ. ಕಾರಣವೇನು ಇಲ್ಲಿದೆ ವಿವರ.
ಭಾರತ ಮತ್ತು ಪಾಕಿಸ್ತಾನ ನಡುವೆ ಈಗ ಕದನವಿರಾಮ ಏರ್ಪಟ್ಟಿದೆ. ಹಾಗಿದ್ದರೂ ನಿನ್ನೆ ರಾತ್ರಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಪಾಕಿಸ್ತಾನ ಯಾವ ರೀತಿ ಹೆಜ್ಜೆಯಿಡುತ್ತದೋ ಅದರ ಮೇಲೆ ನಮ್ಮ ತೀರ್ಮಾನವಿರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಕದನ ವಿರಾಮವಾಗಿದ್ದರೂ ಪಾಕಿಸ್ತಾನದ ಜೊತೆಗೆ ಭಾರತ ಮೊದಲಿನಂತೆ ಸಂಬಂಧವಿಟ್ಟುಕೊಂಡಿಲ್ಲ. ವಿಶೇಷವಾಗಿ ಸಿಂಧೂ ನದಿ ನೀರು ಒಪ್ಪಂದ ರದ್ದುಗೊಳಿಸಿರುವ ತೀರ್ಮಾನದಿಂದ ಭಾರತ ಹಿಂದೆ ಸರಿದಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ದೊಡ್ಡ ತಲೆನೋವು ಎದುರಾಗಿದೆ.
ಇದೇ ಕಾರಣಕ್ಕೆ ಮತ್ತೆ ಸಿಂಧೂ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿನ ಸ್ಥಿತಿಯೇ ಕಾಯ್ದುಕೊಳ್ಳಲು ಭಾರತಕ್ಕೆ ತಾಕೀತು ಮಾಡಿ ಎಂದು ಪಾಕಿಸ್ತಾನ ಈಗ ಅಮೆರಿಕಾಗೆ ಮೊರೆಯಿಡುತ್ತಿದೆ. ಆದರೆ ಭಾರತ ಮಾತ್ರ ಸಿಂಧೂ ನದಿ ಒಪ್ಪಂದದಿಂದ ಹಿಂದೆ ಸರಿದಿರುವ ನಿರ್ಧಾರ ಬದಲಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ನಡೆ ನೋಡಿಕೊಂಡು ಭಾರತ ಮೃದು ಧೋರಣೆ ತಾಳಬಹುದೇನೋ. ಆದರೆ ಸದ್ಯಕ್ಕಂತೂ ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಸಿಗಲ್ಲ.