Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೋ ಬದಲಿಸಿದ ಮೋದಿ !

ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೋ ಬದಲಿಸಿದ ಮೋದಿ !
ನವದೆಹಲಿ , ಶನಿವಾರ, 23 ಅಕ್ಟೋಬರ್ 2021 (08:36 IST)
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಯಾವುದೇ ವಿಶೇಷ ಸಮಾರಂಭಗಳು, ಯೋಜನೆಗಳ ಉದ್ಘಾಟನೆಗಳ ಬಗ್ಗೆ ಅಪ್ಡೇಟ್ ಕೊಡುತ್ತಾರೆ.

ಗಣ್ಯರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ತಮ್ಮ ಸೋಷಿಯಲ್ ಮೀಡಿಯಾಗಳ ಪ್ರೊಫೈಲ್ ಫೋಟೋ ಬದಲಿಸಿದ್ದಾರೆ. ಭಾರತದಲ್ಲಿ ಕೊರೊನಾ ಲಸಿಕೆ 100 ಕೋಟಿ ಡೋಸ್ ನೀಡಿ ದಾಖಲೆ ಸೃಷ್ಟಿಸಿದ ಬೆನ್ನಲ್ಲೇ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಪ್ರೊಫೈಲ್ ಫೋಟೊ ಬದಲಿಸಿಕೊಂಡಿದ್ದಾರೆ. 100 ಕೋಟಿ ಡೋಸ್ ಲಸಿಕೆ  ನೀಡಿದ್ದಕ್ಕೆ ಅಭಿನಂದನೆಗಳು ಭಾರತ ಎಂದು ಹೇಳುವ ಫೋಟೋವೊಂದನ್ನು ಪ್ರೊಫೈಲ್ಗೆ ಹಾಕಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬೊಮ್ಮಾಯಿ