Select Your Language

Notifications

webdunia
webdunia
webdunia
webdunia

ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ : ಟ್ರಂಪ್

ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ : ಟ್ರಂಪ್
ವಾಷಿಂಗ್ಟನ್ , ಗುರುವಾರ, 21 ಅಕ್ಟೋಬರ್ 2021 (13:03 IST)
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕ ಚುನಾವಣೆ ಸಂದರ್ಭದಲ್ಲೇ ಟ್ರಂಪ್ ಈ ಕುರಿತು ಘೋಷಿಸಿದ್ದರು.

ಪ್ರಸ್ತುತ ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ‘ಟ್ರೂತ್ ಸೋಷಿಯಲ್’ ಎಂದು ಹೆಸರಿಡಲಾಗಿದೆ. ನವೆಂಬರ್ನಲ್ಲಿ ‘ಟ್ರೂತ್ ಸೋಷಿಯಲ್’ ಲಾಂಚ್ ಆಗುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟ್ರಂಪ್, ‘‘ತಾಲಿಬಾನಿಗಳು ಟ್ವಿಟರ್ನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ನಮ್ಮ ಅಮೇರಿಕಾ ಅಧ್ಯಕ್ಷರು ಈ ಕುರಿತು ಮೌನತಾಳಿದ್ದಾರೆ. ಅಂತಹ ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಹಾಗೂ ಟ್ವಿಟರ್ನಿಂದ ನಿಷೇಧಕ್ಕೊಳಗಾಗಿದ್ದಾರೆ. ವಿವಾದಾತ್ಮಕ ಪೋಸ್ಟ್ಗಳಿಂದ ಅವರು ಸಾಮಾಜಿಕ ಜಾಲತಾಣಗಳಿಂದ ಬ್ಯಾನ್ ಆಗಿದ್ದರು. ಆ ಸಮಯದಲ್ಲಿ ಟೆಕ್ ದೈತ್ಯರಿಗೆ ಸಡ್ಡು ಹೊಡೆಯಲು ಪ್ರತ್ಯೇಕ ಸಾಮಾಜಿಕ ಜಾಲತಾಣ ಆರಂಭಿಸುವ ಮುನ್ಸೂಚನೆ ನೀಡಿದ್ದರು. ಇದೀಗ ‘ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ’ ಸಂಸ್ಥೆಯ ಮೊದಲ ಪ್ರಾಜೆಕ್ಟ್ನ ಭಾಗವಾಗಿ ‘ಟ್ರೂಥ್ ಸೋಷಿಯಲ್’ ಲಾಂಚ್ ಆಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಜ್ಞರ ಜತೆಗೆ ನರೇಂದ್ರ ಮೋದಿ ಮಹತ್ವದ ಸಂವಾದ