Publish Date: Thu, 21 Oct 2021 (12:17 IST)
Updated Date: Thu, 21 Oct 2021 (12:19 IST)
ವಿಜಯಪುರ : ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ರಹಸ್ಯ ಇದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಎಚ್ಡಿಕೆ ಸವಾಲು ಹಾಕಿದರು. ನನ್ನ ಚರಿತ್ರೆ ಇದ್ದರೆ, ತಂದು ಬಿಡಿ. ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲಾನು ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆ ತರುವಂತೆ ಯತ್ನಾಳ್ಗೆ ಕುಮಾರಸ್ವಾಮಿ ಸವಾಲು ಹಾಕಿದರು. ಇನ್ನು RSS ವಿರೋಧಿಸುವ ಮೂಲಕ ಮುಸ್ಲಿಮರ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೂ ಪ್ರತಿಯಾಗಿ ಎಚ್ಡಿಕೆ ವಾಗ್ಬಾಣ ಬಿಟ್ಟರು.