Select Your Language

Notifications

webdunia
webdunia
webdunia
webdunia

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ಕಟೀಲ್

webdunia
ಹುಬ್ಬಳ್ಳಿ , ಬುಧವಾರ, 20 ಅಕ್ಟೋಬರ್ 2021 (10:09 IST)
ಹುಬ್ಬಳ್ಳಿ : ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಜನರ ಮುಂದೆ ತಾವು ಜೋಡೆತ್ತು ಎಂದು ಹೇಳಿಕೊಳ್ಳುತ್ತಿದ್ದಾರೆ. ವಾಸ್ತವಿಕವಾಗಿ ಜೋಡೆತ್ತು ಅಲ್ಲ ಕಾಡೆತ್ತುಗಳಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಹೇಳಿದರು.

ಸ್ಥಳೀಯ ಸಂಸ್ಥೆಗಳು, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರೆಂಬ ಸ್ಪಷ್ಟತೆ ಇಲ್ಲದ, ಪಕ್ಷ ನಡೆಸಲಾಗದ ದುಸ್ಥಿತಿಗೆ ತಲುಪಿದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಗುಂಪಿನ ನಡುವಿನ ಶೀತಲ ಸಮರದಿಂದ ಬರುವ ವಿಧಾನಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಎರಡು ಹೋಳಾಗಲಿದೆ. ಕುಟುಂಬ ರಾಜಕಾರಣದ ಜೆಡಿಎಸ್ನಲ್ಲಿ ಕುಟುಂಬದಲ್ಲೇ ಕಲಹ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರೆಂಬ ಸ್ಪಷ್ಟತೆ ಜನತೆಗಿರಲಿ, ಸ್ವತಃ ಆ ಪಕ್ಷದ ನಾಯಕರಿಗೆ ಇಲ್ಲ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ ನಲ್ಲಿ ಕೊರೋನ ಸೋಂಕು ಏರಿಕೆ