Select Your Language

Notifications

webdunia
webdunia
webdunia
webdunia

ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬೊಮ್ಮಾಯಿ

ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬೊಮ್ಮಾಯಿ
ಬೆಂಗಳೂರು , ಶನಿವಾರ, 23 ಅಕ್ಟೋಬರ್ 2021 (07:31 IST)
ಹಾವೇರಿ : ನರೇಂದ್ರ ಮೋದಿ ಸರ್ಕಾರದ ಯೋಜನೆ ಎಲ್ಲ ಮನೆಗಳಿಗೆ ತಲುಪಿದೆ. ಯೋಜನೆ ಪಡೆಯದ ಒಂದು ಮನೆ ತೋರಿಸಿ ನೋಡೋಣ ಎಂದು ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿಯಲ್ಲಿ ಯಡಿಯೂರಪ್ಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಶತಕೋಟಿ ಡೋಸ್ ಲಸಿಕೆ ನೀಡಿಕೆಗೆ ವಿಶ್ವವೇ ಹೊಗಳ್ತಿದೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ. ಹೀಗೆ ಟೀಕೆ ಮಾಡಿದರೆ ಜನರು ಒಪ್ಪುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್‌ನವರು ಹಣಬಲ, ಜಾತಿಬಲದಿಂದ ಚುನಾವಣೆ ಗೆಲ್ಲುವುದು ಆರಂಭ ಮಾಡಿದರು. ನರೇಂದ್ರ ಮೋದಿ ಬಂದ ಬಳಿಕ ಕಾಂಗ್ರೆಸ್ ಧೂಳೀಪಟವಾಗಿದೆ.
ಕಾಂಗ್ರೆಸ್ ಗೆದ್ರೆ ಜನಬೆಂಬಲ, ನಾವು ಗೆದ್ರೆ ಹಣಬಲವಾ? ನಮಗೆ ಜನಬೆಂಬಲ ಇಲ್ವಾ ಎಂದು ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆ ಕೇಳಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ಹಾನಗಲ್ ಕ್ಷೇತ್ರದ ಮತದಾರರೇ ಉತ್ತರ ನೀಡುತ್ತಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸ್ತಾರೆ ಎಂದು ಬಮ್ಮನಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಡ್ಡಾಯ ಮಾಡುವಂತೆ ಕರವೇ ಒತ್ತಾಯ