Publish Date: Fri, 22 Oct 2021 (21:05 IST)
Updated Date: Fri, 22 Oct 2021 (21:08 IST)
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇದು ಕೊಡಗು ಜಿಲ್ಲಾಧಿಕಾರಿಗಳು ನಗರಸಭಾ ಆಯುಕ್ತರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ಕಚೇರಿಗೆ ಭೇಟಿ ನೀಡಿ ಮಡಿಕೇರಿ ತಾಲೂಕು ಹಾಗೂ ಮಡಿಕೇರಿ ನಗರದಾದ್ಯಂತ ಅಂಗಡಿ ಮಳಿಗೆಗಳು ಹಾಗೂ ಹೋಟೆಲ್ ರೆಸೋರ್ಟ್ ಹೋಂಸ್ಟೇ ಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಕನ್ನಡ ಕಡ್ಡಾಯ ಮಾಡುವಂತೆ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ರವಿ ಗೌಡ. ಮೂರ್ನಾಡು ಹೋಬಳಿ ಅಧ್ಯಕ್ಷರಾದ ವಸಂತ್. ಮಡಿಕೇರಿ ನಗರ ಅಧ್ಯಕ್ಷರಾದ ದೇವೋಜಿ. ನಗರ ಮಹಿಳಾ ಘಟಕದ ಅಧ್ಯಕ್ಷರಾದ ಮಿನಾಜ್ ಪ್ರವೀಣ್. ನಗರ ಪ್ರಧಾನಕಾರ್ಯದರ್ಶಿ ಸುರೇಶ್ ಕುಮಾರ್. ಸಹಕಾರ್ಯದರ್ಶಿ ಚೇತನ್. ಸಂಘಟನಾ ಕಾರ್ಯದರ್ಶಿ ಶೇಖರ್. ಸದಸ್ಯರುಗಳಾದ ಗಜೇಂದ್ರ. ಶರಣ್ ಕುಮಾರ್ ಹಾಗೂ ಇನ್ನೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.