ಸಾರ್ವಜನಿಕರಿಂದ ಮೊದಲು ಆಧಾರ ಕಾಡ್೯ ಪಡೆದು ವೈಜ್ಞಾನಿಕವಾಗಿ ನೋಂದಣಿ ಮಾಡಿಸಿ ನೂರು ಕೋಟಿ ಲಸಿಕೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಮುಂದೆ ಒಂದು ದಿನ ಈ ರೀತಿಯಾಗಿ ಪ್ರಶ್ನೆ ಮಾಡುತ್ತಾರೆ ಎಂದು ತಿಳಿದು ಮುಂದಾಲೋಚನೆಯಿಂದ ಕೇಂದ್ರ ಸರ್ಕಾರ ನಿಷ್ಠೆಯಿಂದ ಲಸಿಕೀಕರಣ ಮಾಡಿದೆ ಎಂದರು.
ಹಣ ಖರ್ಚು ಮಾಡಿ ಚುನಾವಣೆ ಮಾಡುವುದು ಕಾಂಗ್ರೆಸ್ ನವರಿಗೆ ಸಾಮಾನ್ಯ ಅದಕ್ಕೆ ಅವರ ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ. ಯಾವಾಗ ಅವರು ವಿರೋಧ ಪಕ್ಷದಲ್ಲಿರುತ್ತಾರೆ ಅವರು ಈ ರೀತಿ ಹೇಳುತ್ತಾರೆ ಎಂದು ಹೇಳಿದರು.
ಮಾಸ್ಟರ್ ಪ್ಲಾನ್: ಕಿಮ್ಸ್ ಆಸ್ಪತ್ರೆಗೆ ವಿಶೇಷವಾದ ಅನುದಾನ ನೀಡುವ ಮೂಲಕ ಈಗಾಗಲೇ ಇರುವಂತಹ ವೈದ್ಯಕೀಯ ಸೌಲಭ್ಯವನ್ನು ಇನ್ನು ಉನ್ನತ ಮಟ್ಟಕ್ಕೆ ಹೆಚ್ಚುಸುವುದು. ವಿಶೇಷವಾದ ಶಸ್ತ್ರಚಿಕಿತ್ಸೆ ಸಲಕರಣೆಗ ನೀಡುವುದು ಸಲುವಾಗಿ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳನ್ನು ಕರೆದು ಒದಗಿಸುವ ಕಾರ್ಯ ಮಾಡಲಾಗುತ್ತದೆ.