Select Your Language

Notifications

webdunia
webdunia
webdunia
webdunia

ಮತದಾರರ ಸಹಾಯವಾಣಿ ಆಪ್ ಬಿಡುಗಡೆ

ಮತದಾರರ ಸಹಾಯವಾಣಿ ಆಪ್ ಬಿಡುಗಡೆ
bangalore , ಶುಕ್ರವಾರ, 22 ಅಕ್ಟೋಬರ್ 2021 (20:37 IST)
ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆಪ್(ವೋಟರ್ ಹೆಲ್ಫ್ಲೈಾನ್ ಆಪ್) ಅನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಮತದಾರರು, ನಾಗರಿಕರು ತಮ್ಮ ಮೊಬೈಲ್ನ ಲ್ಲಿ ಮತದಾರರ ಸಹಾಯವಾಣಿ ಆಪ್ (ವೋಟರ್ ಹೆಲ್ಫ್ ಲೈನ್ ಆಪ್) ನ್ನು ಡೌನ್ಲೋುಡ್ ಮಾಡಿಕೊಳ್ಳಲು ಕೋರಿದೆ.  
ಈ ಮತದಾರರ ಸಹಾಯವಾಣಿ ಆಪ್ನುಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಮತ್ತು ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ-8 ರಲ್ಲಿ ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8ಎ ರಲ್ಲಿ ಮತ್ತು ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ರಲ್ಲಿ ಅರ್ಜಿಗಳನ್ನು ಆನ್ಲೈಕನ್ ಮೂಲಕ ಸಲ್ಲಿಸಬಹುದಾಗಿದೆ.  
ಅಲ್ಲದೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದಾಗಿದೆ ಹಾಗೂ ಮತಗಟ್ಟೆಗಳ ವಿವರ, ಚುನಾವಣೆಯ ಸಮಯದಲ್ಲಿ ಮತದಾನದ ಶೇಕಡವಾರು ಅಂಕಿ ಅಂಶಗಳನ್ನು ಮತ್ತು ಮತದಾನದ ಫಲಿತಾಂಶವನ್ನು ಸಹ ಮತದಾರರ ಸಹಾಯವಾಣಿ ಆಪ್ನನಲ್ಲಿ ಪಡೆಯಬಹುದಾಗಿದೆ. 
ಆದ್ದರಿಂದ ಕೊಡಗು ಜಿಲ್ಲೆಯ ಎಲ್ಲಾ ಮತದಾರರು/ ನಾಗರಿಕರು ತಮ್ಮ ಮೊಬೈಲ್ನ ಲ್ಲಿ ಮತದಾರರ ಸಹಾಯವಾಣಿ ಆಪ್ ಅನ್ನು ಡೌನ್ಲೋಗಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮಾತುಮಾತಿಗೂ ಅನ್ನಭಾಗ್ಯ ಅಂತಾರೆ : ಬೊಮ್ಮಾಯಿ