Select Your Language

Notifications

webdunia
webdunia
webdunia
webdunia

‘ಸಾಲ ಸಂಪರ್ಕ ಕಾರ್ಯಕ್ರಮಕ್ಕೆ’ ಶಾಸಕರಾದ ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಚಾಲನೆ

webdunia
, ಶುಕ್ರವಾರ, 22 ಅಕ್ಟೋಬರ್ 2021 (20:42 IST)
ಕೃಷಿಕರಿಗೆ ಸುಲಭವಾಗಿ ಸಾಲ ದೊರೆಯುವಂತಾಗಲು ‘ಸಾಲ ಸಂಪರ್ಕ ಕಾರ್ಯಕ್ರಮಕ್ಕೆ’ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರು ಕೃಷಿಕರಿಗೆ ‘ಸಾಲದ ಮಂಜೂರಾತಿ ಚೆಕ್’ ನೀಡುವ ಮೂಲಕ ಶುಕ್ರವಾರ ಚಾಲನೆ ನೀಡಿದ್ದಾರೆ.   
ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ‘ಸಾಲ ಸಂಪರ್ಕ ಕಾರ್ಯಕ್ರಮಕ್ಕೆ’ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಬ್ಯಾಂಕುಗಳಲ್ಲಿ ಉದ್ಯಮಿಗಳಿಗೆ ನೂರಾರು ಕೋಟಿ ರೂ. ಸಾಲ ನೀಡುತ್ತಾರೆ. ಆದರೆ ಕೃಷಿಕರಿಗೆ ಸಾಲ ನೀಡಲು ಹಿಂದೆ-ಮುಂದೆ ನೋಡುತ್ತಾರೆ. ಇದನ್ನು ಗಮನಿಸಿದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೃಷಿಕರಿಗೆ ಸುಲಭವಾಗಿ ಸಾಲ ದೊರೆಯುವಂತಾಗಲು ‘ಸಾಲ ಸಂಪರ್ಕ ಕಾರ್ಯಕ್ರಮ’ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.  
ಜಿಲ್ಲೆಯಲ್ಲಿ ಭೂಮಿಗೆ ಲಕ್ಷಗಟ್ಟಲೆ ಬೆಲೆ ಇದ್ದು, ಕೃಷಿಕರಿಗೆ ಧಾರಾಳವಾಗಿ ಸಾಲ ನೀಡಬಹುದಾಗಿದೆ. ಆದ್ದರಿಂದ ಕೃಷಿಕರಿಗೆ ಸಾಲ ನೀಡುವಂತಾಗಬೇಕು. ಕೃಷಿಕರು ಸಹ ಸಾಲವನ್ನು ಮರುಪಾವತಿ ಮಾಡಬೇೀಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.    
ಜಿಲ್ಲೆಯಲ್ಲಿ ಸಾಲ ಪಡೆದು, ಸಾಲ ಪಾವತಿಸುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಬ್ಯಾಂಕುಗಳು ಕೃಷಿಕರಿಗೆ ಸಾಲ ನೀಡಲು ವಿಳಂಭ ಮಾಡಬಾರದು. ರೈತರಿಗೂ ಒಳಿತಾಗಬೇಕು ಮತ್ತು ಬ್ಯಾಂಕುಗಳು ಉಳಿಯಬೇಕು ಎಂದು ಶಾಸಕರು ಸಲಹೆ ಮಾಡಿದರು.   
ರಾಷ್ಟ್ರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು ಎಂದು ಅಪ್ಪಚ್ಚು ರಂಜನ್ ಅವರು ಹೇಳಿದರು.      
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿಕರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಈ ಕಾರ್ಯಕ್ರಮಗಳು ಗ್ರಾಮೀಣ ಕೃಷಿಕರಿಗೆ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಬ್ಯಾಂಕುಗಳು ಇನ್ನಷ್ಟು ಸ್ಪಂದಿಸಬೇಕು ಎಂದು ಅವರು ಸಲಹೆ ಮಾಡಿದರು.
ಸಾಲ ಸಂಪರ್ಕ ಕಾರ್ಯಕ್ರಮವನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸರ್ಕಾರ ಮುಂದಾಗಿದೆ. ಪ್ರತಿಯೊಬ್ಬರೂ ಸ್ವಾವಲಂಬನೆ ಮತ್ತು ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು. 
ಪ್ರಧಾನಮಂತ್ರಿ ಅವರು ಜಾರಿಗೊಳಿಸಿರುವ ಮುದ್ರಾ, ಸ್ಟಾಂಡ್ ಆಫ್ ಇಂಡಿಯಾ, ಪಿಎಂ ಸ್ವನಿಧಿ, ಇಸಿಎಲ್ಜಿಕಎಸ್, ಪಿಎಂಇಜಿಪಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೃಷಿಕರಿಗೆ ತಲುಪಿಸಬೇಕು. ಅಂಬೇಡ್ಕರ್, ವಾಲ್ಮೀಕಿ, ಡಿ.ದೇವರಾಜ ಅರಸು ನಿಗಮಗಳಲ್ಲಿ ಸಾಲ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗಲು ಬ್ಯಾಂಕುಗಳು ಕೃಷಿಕರಿಗೆ ಹತ್ತಿರವಾಗಬೇಕು. ಪ್ರಧಾನಮಂತ್ರಿ ಅವರ ಕನಸನ್ನು ನನಸು ಮಾಡಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು. 
ಕೋವಿಡ್ ಸಂದರ್ಭದಲ್ಲಿ ಬ್ಯಾಂಕುಗಳು ಎಲ್ಲಾ ಗ್ರಾಹಕರಿಗೂ ಸ್ಪಂದಿಸುವಲ್ಲಿ ಕಾರ್ಯನಿರ್ವಹಿಸಿವೆ ಎಂದು ಕೆ.ಜಿ.ಬೋಪಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 
ಯೂನಿಯನ್ ಬ್ಯಾಂಕ್ನಯ ಪ್ರಾದೇಶಿಕ ವ್ಯವಸ್ಥಾಪಕರಾದ ಜ್ಯೋತಿ ಕೃಷ್ಣನ್ ಅವರು ಮಾತನಾಡಿ ಸಾಲ ಸಂಪರ್ಕ ಕಾರ್ಯಕ್ರಮ ಕೃಷಿಕರಿಗೆ ತಲುಪಿಸುವಲ್ಲಿ ಮುಂದಾಗುವುದು. ಆ ದಿಸೆಯಲ್ಲಿ ಪ್ರತಿಯೊಬ್ಬ ಕೃಷಿಕರೂ ಸಹ ಜೀವ ವಿಮೆ ಪಡೆಯಬೇಕು ಎಂದು ಅವರು ಸಲಹೆ ಮಾಡಿದರು. 
ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ವಿವಿಧ ಜಿಲ್ಲೆಗಳಲ್ಲಿ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಮತ್ತಿತರ ಬ್ಯಾಂಕುಗಳು ಹಾಗೂ ನಬಾರ್ಡ್ ನಂತಹ ಇತರೆ ಸರ್ಕಾರಿ ಇಲಾಖೆಗಳು ಕೈಜೋಡಿಸಿವೆ ಎಂದರು.  
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ ಬ್ಯಾಂಕುಗಳಲ್ಲಿ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಾಲದ ಅರ್ಜಿಗಳನ್ನು ಸ್ವೀಕರಿಸಲು ಮಂಜೂರಾತಿ ಅಥವಾ ತಾತ್ವಿಕ ಮಂಜೂರಾತಿ ಪತ್ರಗಳನ್ನು ವಿತರಿಸಲು ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
        ಸಾಲ ಸಂಪರ್ಕ ಯೋಜನೆಯಲ್ಲಿ ಕೃಷಿಗೆ 9.79 ಕೋಟಿ ರೂ. ಎಂಎಸ್ಎಂಜಇ ಕ್ಷೇತ್ರಕ್ಕೆ 2.27 ಕೋಟಿ ರೂ., ಮನೆ, ವಸತಿ ಕ್ಷೇತ್ರಕ್ಕೆ 8.06 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 1.20 ಕೋಟಿ ರೂ., ಮುದ್ರಾ ಯೋಜನೆಯಡಿಯಲ್ಲಿ 1.92 ಕೋಟಿ ರೂ. ಇತರೆ ವಿಭಾಗದಲ್ಲಿ 10.60 ಕೋಟಿ ರೂ. ಹೀಗೆ ಒಟ್ಟಾರೆ 33.84 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಆರ್.ಕೆ.ಬಾಲಚಂದ್ರ ಅವರು ಮಾಹಿತಿ ನೀಡಿದರು. 
ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಸೆಂಥಿಲ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ರಮೇಶ್ ಬಾಬು, ಎಸ್ಬಿ ಐನ ದಿನೇಶ್ ಪೈ, ಹಲವು ಬ್ಯಾಂಕುಗಳ ವ್ಯವಸ್ಥಾಪಕರು, ಕೃಷಿಕರು ಇತರರು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರ ಸಹಾಯವಾಣಿ ಆಪ್ ಬಿಡುಗಡೆ