Publish Date: Sun, 13 Sep 2020 (13:01 IST)
Updated Date: Sun, 13 Sep 2020 (13:03 IST)
ನವದೆಹಲಿ: ಕೈಯಲ್ಲಿ ಧಾರ್ಮಿಕ ಚಿಹ್ನೆಯ ಟ್ಯಾಟೂ ಬಳಸಿದ್ದಕ್ಕೆ ಯುವಕನೊಬ್ಬನ ಕೈಯನ್ನೇ ಕತ್ತರಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಪಾರ್ಕ್ ನಲ್ಲಿ ಕುಳಿತಿದ್ದ 28 ವರ್ಷದ ಯುವಕನನ್ನು ದುಷ್ಕರ್ಮಿಗಳು ಮನಸೋ ಇಚ್ಛೆ ಥಳಿಸಿದ್ದಲ್ಲದೆ, ಆತನ ಕೈಯಲ್ಲಿದ್ದ ಧಾರ್ಮಿಕ ಚಿಹ್ನೆ ಗಮನಿಸಿ ಕೈಯನ್ನೇ ಕತ್ತರಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಯುವಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.