Publish Date: Fri, 11 Sep 2020 (09:51 IST)
Updated Date: Fri, 11 Sep 2020 (10:28 IST)
ನವದೆಹಲಿ: ಕಿವಿ ಕೇಳಿಸದ 9 ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತ ಬಾಲಕರು ಮಾನಭಂಗ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮನೆ ಬಳಿ ಆಟವಾಡಿಕೊಂಡಿದ್ದ ಬಾಲಕಿಯನ್ನು ಅಪ್ರಾಪ್ತ ಬಾಲಕರು ಹಲವು ಬಾರಿ ಸೆಕ್ಸ್ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಬೇಕಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.