Publish Date: Mon, 12 Apr 2021 (07:31 IST)
Updated Date: Mon, 12 Apr 2021 (07:32 IST)
ಅಹಮದಾಬಾದ್ : ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ವಿವಾಹಕ್ಕೂ ಮುನ್ನ ತಿಳಿಸದ ಹಿನ್ನಲೆಯಲ್ಲಿ 40 ವರ್ಷದ ಮಹಿಳೆಯೊಬ್ಬಳು ತಮ್ಮ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಿಳೆ ಫೇಸ್ ಬುಕ್ ನಲ್ಲಿ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಇವರಿಬ್ಬರು ಪ್ರೀತಿಸಿ ಕಳೆದ ವರ್ಷ ವಿವಾಹವಾದರು. ಆದರೆ ಆತ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಆಗ ಪತ್ನಿ ಆತನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋದಾಗ ಆತನಿಗೆ ಮಾನಸಿಕ ಸಮಸ್ಯೆ ಇರುವುದು ತಿಳಿದುಬಂದಿದೆ. ಅಲ್ಲದೇ ಆತನಿಗೆ ಈ ಹಿಂದೆ ಮದುವೆಯಾಗಿದ್ದು, ಇದೇ ಕಾರಣಕ್ಕೆ ಪತ್ನಿ ತ್ಯಜಿಸಿದ್ದಾಳೆ ಎನ್ನಲಾಗಿತ್ತು.
ಹೀಗಾಗಿ ಮಹಿಳೆ ಪತಿಯ ಮೇಲೆ ಕೋಪಗೊಂಡು ವಿವಾಹ ಪೂರ್ವ ಈ ವಿಚಾರ ತಿಳಿಸದ ಕಾರಣ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಚಿಟಿಂಗ್ ಕೇಸ್ ದಾಖಲಿಸಿದ್ದಾಳೆ.