Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿಯಂದು ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ

ಮೊದಲ ರಾತ್ರಿಯಂದು ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ
ಕೋಲ್ಹಾಪುರ , ಭಾನುವಾರ, 11 ಏಪ್ರಿಲ್ 2021 (09:44 IST)
ಕೋಲ್ಹಾಪುರ : ಮಹಿಳೆಯೊಬ್ಬಳು ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪತಿ ಮತ್ತು ಆತನ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಡಿವೋರ್ಸ್ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

ಇತ್ತೀಚೆಗೆ ಇಬ್ಬರು ಅವಳಿ ಸಹೋದರಿಯರಿಗೆ ಇಬ್ಬರು ಸಹೋದರರ ಜೊತೆ ವಿವಾಹವಾಗಿದೆ. ಆ ವೇಳೆ ಸಂಪ್ರದಾಯದಂತೆ ಮೊದಲ ರಾತ್ರಿಯಂದು ಕನ್ಯತ್ವ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಒಬ್ಬಳಿಗೆ ಮೊದಲ ರಾತ್ರಿ ರಕ್ತಸ್ರಾವವಾಗದ ಕಾರಣ ಪತಿ ಮತ್ತು ಆತನ ಮನೆಯವರು ಆಕೆಗೆ ವಿವಾಹ ಪೂರ್ವ ಸಂಬಂಧವಿದೆ ಎಂದು ದೂಷಿಸಿ  ಹಲ್ಲೆ ನಡೆಸಿ ತವರು ಮನೆಗೆ ಕಳುಹಿಸಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆಕೆಯ ಪತಿ ಮತ್ತು ಮನೆಯವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧಿಕರ ಮನೆಗೆ ಬಂದ ಅಪ್ರಾಪ್ತೆಯ ಮೇಲೆ ಅಜ್ಜ, ಮಾವನಿಂದ ಮಾನಭಂಗ