Publish Date: Sun, 11 Apr 2021 (09:38 IST)
Updated Date: Sun, 11 Apr 2021 (09:42 IST)
ಭೋಪಾಲ್ : ಅಪ್ರಾಪ್ತ ಬಾಲಕಿಯ ಮೇಲೆ ತಾಯಿಯ ದೂರದ ಸಂಬಂಧಯಾದ ಅಣ‍್ಣ ಮತ್ತು ಚಿಕ್ಕಪ್ಪ ಕೋಣೆಯಲ್ಲಿ ಬಂಧಿಸಿ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಸಂತ್ರಸ್ತೆ ತಾಯಿಯ ಸಂಬಂಧಿ ಮನೆಗೆ ಹೋಗಿದ್ದಾಗ ಅಜ್ಜ ಮತ್ತು ಮಾವ ಆಕೆಯನ್ನು ಕೋಣೆಗೆ ಕರೆದುಕೊಂಡು ಹೋಗಿ ಇಂತಹ ಘೋರ ಕೃತ್ಯ ಎಸಗಿದ್ದಾರೆ. ಬಳಿಕ ಈ ವಿಚಾರ ಯಾರಿಗೂ ತಿಳಿಸದಂತೆ 20ರೂ. ಹಾಗೂ ಸಮೋಸಾಗಳನ್ನು ನೀಡಿದ್ದಾರೆ.
ಮಗಳ ವರ್ತನೆಯಲ್ಲಿ ಬದಲಾವಣೆ ಕಂಡು ತಾಯಿ ಪ್ರಶ್ನಿಸಿದಾಗ ಆಕೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ತಕ್ಷಣ ತಾಯಿ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.