Publish Date: Mon, 05 Apr 2021 (10:45 IST)
Updated Date: Mon, 05 Apr 2021 (10:46 IST)
ಬೆಂಗಳೂರು: ಇತ್ತ ಸಿಡಿ ಲೇಡಿ ಎಸ್ ಐಟಿ ತನಿಖೆ ಎದುರಿಸುತ್ತಿದ್ದರೆ ಅತ್ತ ಆಕೆಯ ತಾಯಿ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿ ಲೇಡಿ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದ ವಿಜಯಪುರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಕಿರಿಯ ಪುತ್ರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇವರ ಭದ್ರತೆಗೆ ಪೊಲೀಸರನ್ನೂ ನಿಯೋಜಿಸಲಾಗಿದೆ.
ಸಕ್ಕರೆ ಖಾಯಿಲೆ ತೀವ್ರಗೊಂಡ ಹಿನ್ನಲೆಯಲ್ಲಿ ಆಕೆಯ ಕೈ-ಕಾಲುಗಳಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಇತ್ತ ಇಂದು ಸಿಡಿ ಲೇಡಿ ಎಸ್ ಐಟಿ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಬೇಕಿದೆ.