Publish Date: Sat, 10 Apr 2021 (10:05 IST)
Updated Date: Sat, 10 Apr 2021 (10:07 IST)
ಪಾಟ್ನಾ : ಅಪ್ರಾಪ್ತ ಹುಡುಗರಿಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಬಿಹಾರದ ಸಿವಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಇಬ್ಬರು ಅಪ್ರಾಪ್ತರು ಸೇರಿ ಬಾಲಕಿಯನ್ನು ಪೊದೆಯೊಳಗೆ ಕರೆದುಕೊಂಡು ಹೋಗಿ ಇಂತಹ ಘೋರ ಕೃತ್ಯ ಎಸಗಿದ್ದಾರೆ. ಬಾಲಕಿ ಅಳುತ್ತಿದ್ದು, ಅವಳ ಬಟ್ಟೆಯಲ್ಲಿ ರಕ್ತದ ಕಲೆ ಕಂಡುಬಂದ ಹಿನ್ನಲೆಯಲ್ಲಿ ತಾಯಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ತಕ್ಷಣ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟರೊಳಗೆ ಆರೋಪಿ ಹುಡುಗರನ್ನು ಅವರ ಮನೆಯವರು ಬೇರೆಕಡೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಮನೆಯವರಿಗೆ ಹುಡುಗರನ್ನು ಕರೆದುಕೊಂಡು ಬಂದು ಒಪ್ಪಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.