Publish Date: Thu, 25 Mar 2021 (09:09 IST)
Updated Date: Thu, 25 Mar 2021 (09:14 IST)
ಲೂಧಿಯಾನ : 43 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ಪಂಜಾಬ್ ನ ಲೂಧಿಯಾನದಲ್ಲಿ ನಡೆದಿದೆ.
ಕೊರೊನಾ ಕಾರಣದಿಂದ ಶಾಲೆ ಶುರುವಾಗದ ಕಾರಣ ಹುಡುಗಿ ಅಜ್ಜಿಯ ಮನೆಗೆ ತೆರಳಿದ್ದಾಳೆ. ಅಲ್ಲಿ ತಾಯಿಯ ಸಹೋದರ ಹುಡುಗಿಗೆ ಪಾನೀಯದಲ್ಲಿ ಮತ್ತು ಬರುವ ಔಷಧ ಮಿಕ್ಸ್ ಮಾಡಿ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ, ಹೀಗೆ ಆತ ಹಲವು ಬಾರಿ ಆಕೆಯನ್ನು ಬಳಸಿಕೊಂಡಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ತನ್ನ ಪೋಷಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.