Publish Date: Thu, 25 Mar 2021 (09:03 IST)
Updated Date: Thu, 25 Mar 2021 (09:07 IST)
ಆಗ್ರಾ : 17 ವರ್ಷದ ಹುಡುಗನೊಬ್ಬ ತನ್ನ 15 ವರ್ಷದ ಸಹೋದರಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಫರುಖಾಬಾದ್ ನಲ್ಲಿ ನಡೆದಿದೆ.
ಮೃತಪಟ್ಟ ಸಂತ್ರಸ್ತೆ ತನ್ನ ಸಹೋದರನಿಗೆ ಇಷ್ಟವಾಗದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ಸಹೋದರ ಆತನ ಜೊತೆ ಸಂಬಂಧ ಕಡಿದುಕೊಳ್ಳವಂತೆ ಹೇಳಿದ್ದಾನೆ. ಇದನ್ನು ನಿರಾಕರಿಸಿದ ಹುಡುಗಿ ಸಂಬಂಧವನ್ನು ಮುಂದುವರಿಸಿದ್ದಾಳೆ.
ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ಸಹೋದರ ಆಕೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.