Select Your Language

Notifications

webdunia
webdunia
webdunia
Sunday, 13 April 2025
webdunia

ಗರ್ಭಧರಿಸಬೇಕೆಂಬ ಹಂಬಲಕ್ಕೆ ಇಂತಹ ಘೋರ ಕೃತ್ಯ ಎಸಗಿದ ಮಹಿಳೆ

ನವದೆಹಲಿ
ನವದೆಹಲಿ , ಮಂಗಳವಾರ, 23 ಮಾರ್ಚ್ 2021 (07:05 IST)
ನವದೆಹಲಿ : ತಾನು ಗರ್ಭಧರಿಸಬೇಕೆಂಬ ಹಂಬಲಕ್ಕೆ ಬೇರೆಯವರ ಮೂರು ವರ್ಷದ ಮಗುವನ್ನು ತಾಂತ್ರಿಕ ಸಲಹೆಯಂತೆ ಕೊಲೆ ಮಾಡಿದ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.

ಆರೋಪಿ ಮಹಿಳೆಗೆ ಮದುವೆಯಾಗಿ ಹಲವು ವರ್ಷವಾದರೂ ಮಕ್ಕಳಾಗಿರಲಿಲ್ಲ. ಹಾಗಾಗಿ ಪತಿ ಮತ್ತು ಕುಟುಂಬದವರ ನಿಂದನೆಗೆ ಗುರಿಯಾಗಿದ್ದಳು. ಆದಕಾರಣ ತಾಂತ್ರಿಕನೊಬ್ಬನನ್ನು ಭೇಟಿ ಮಾಡಿ ಸಲಹೆ ಕೇಳಿದಾಗ ಆತ ಮಗುವನ್ನು ಬಲಿಕೊಟ್ಟರೆ ಗರ್ಭಧರಿಸುವುದಾಗಿ ಹೇಳಿದ್ದಾನೆ. ಅದರಂತೆ ಮಹಿಳೆ 3 ವರ್ಷದ ಮಗುವನ್ನು ಅಪಹರಿಸಿ ಕೊಲೆ ಮಾಡಿ ದೇಹವನ್ನು ಕಟ್ಟಡವೊಂದರ ಛಾವಣಿಯ ಮೇಲೆ ಎಸೆದಿದ್ದಾಳೆ.

ಇತ್ತ ಮಗು ಕಾಣೆಯಾದ ಬಗ್ಗೆ ಮೃತ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹುಡುಕಾಡಿದಾಗ ಮಗುವಿನ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕನ ಗಂಡನ ಕಿರುಕುಳ ತಾಳಲಾರದೆ ಯುವತಿ ಮಾಡಿದ್ದೇನು ಗೊತ್ತಾ?