Publish Date: Sun, 28 Mar 2021 (07:09 IST)
Updated Date: Sun, 28 Mar 2021 (07:11 IST)
ಅಲಿಗರ್ : ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯಲ್ಲಿ ಐಟಿಐ ವಿದ್ಯಾರ್ಥಿಯೊಬ್ಬ ತನ್ನ ಸಹೋದರಿಯ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೊಲೆಯಾಗಿದ್ದಾನೆ.
ಸಹೋದರಿ ಯುವಕನನೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದುಕೊಂಡ ಸಂತ್ರಸ್ತ ಯುವಕನಿಗೆ ತನ್ನ ಸಹೋದರಿಯಿಂದ ದೂರವಿರಲು ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವಕ ತನ್ನ ಗೆಳೆಯರಿಬ್ಬರ ಜೊತೆ ಸೇರಿ ಸಂತ್ರಸ್ತನನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದಾರೆ. ಅಷ್ಟೇ ಅಲ್ಲದೇ ಅವರ ಕುಟುಂಬದ ಬಳಿ ಮಗನನ್ನು ಅಪಹರಿಸಿದ್ದು, 20ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.