Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಿಡಿಯಲ್ಲಿದ್ದ ಯುವತಿ ಭೇಟಿಗೆ ಯತ್ನಿಸಿದ ಬಗ್ಗೆ ಡಿಕೆಶಿ ಹೇಳಿದ್ದೇನು?

webdunia
ಶನಿವಾರ, 27 ಮಾರ್ಚ್ 2021 (12:59 IST)
ಬೆಂಗಳೂರು : ಸಿಡಿಯಲ್ಲಿದ್ದ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಷ್ಟ ಎಂದು ಬಂದವರಿಗೆ ನಾನು ಸಹಾಯ ಮಾಡುತ್ತೇನೆ, ಡಿಕೆಶಿ ಭೇಟಿಗೆ ಪ್ರಯತ್ನಿಸಿದ್ದೆ ಎಂದು ಯುವತಿ ಹೇಳಿದ್ದಾರೆ. ನೊಂದವರು ಪ್ರಾಮಾಣಿಕರಿದ್ದರೆ ನಾವು ಸಹಾಯ ಮಾಡುತ್ತೇವೆ. ನಮ್ಮ ಕಚೇರಿಗೆ ದಿನಕ್ಕೆ ಕಷ್ಟ ಎಂದು ಹೇಳಿಕೊಂಡು ಬೇಕಾದಷ್ಟು ಜನರು ಬರುತ್ತಾರೆ. ಹಾಗೇ ಅವ್ರೂ ಬಂದಿರಬಹುದು ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ಐವರು ನಾಯಕರನ್ನು ಸೆಳೆಯುವುದಾಗಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಮಾಹಿತಿ ತಿಳಿಯಲು ನಾವು ಟ್ರ್ಯಾಕ್ ಹಾಕಿದ್ದು ನಿಜ. ಇದನ್ನು ನಾನು ಸದನದಲ್ಲೇ ಹೇಳಿದ್ದೇನೆ. ಆದರೆ ಇದು ವೈಯಕ್ತಿಕ ವಿಚಾರ , ಅದು ನನಗೆ ಅವಶ್ಯಕತೆ ಇಲ್ಲ. ನರೇಶ್ ನನಗೆ ಬೇಕಾದ ಹುಡುಗ, ನಾನು ಭೇಟಿಯಾಗಿದ್ದೇನೆ. ನಾನು ಕೆಲವು ವಿಚಾರ ತಿಳಿಸಿದ್ದೇನೆ. ಅವನಿಂದ ಪಡೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಜಾಗತಿಕ ಹವಾಮಾನ ಸಮ್ಮೇಳನಕ್ಕೆ ಪ್ರಧಾನಿ ಮೋದಿಗೆ ಆಹ್ವಾನ