Publish Date: Sat, 27 Mar 2021 (08:44 IST)
Updated Date: Sat, 27 Mar 2021 (08:49 IST)
ಗುರುಗ್ರಾಮ್ : ಹುಡುಗನ ಮೇಲೆ ನೆರೆಮನೆಯಾತ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತನ ತಾಯಿ ಮನೆಕೆಲಸಕ್ಕೆಂದು ಹೊರಗಡೆ ಹೋದಾಗ ಹುಡುಗನನ್ನು ತನ್ನ ಕೋಣೆಗೆ ಕರೆದ ಆರೋಪಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮತ್ತು ಆತನನ್ನು ಥಳಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಾಲಕ ನೋವಿನಿಂದ ಅಳುತ್ತಾ ಮನೆಗೆ ಬಂದಾಗ ತಾಯಿ ವಿಚಾರ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ.
ಹುಡುಗನ ಖಾಸಗಿ ಭಾಗಕ್ಕೆ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.