Select Your Language

Notifications

webdunia
webdunia
webdunia
webdunia

ತಮ್ಮ ಪವನ್ ಕಲ್ಯಾಣ್‌ ಪಕ್ಷಕ್ಕೆ ₹ 5 ಕೋಟಿ ಗಿಫ್ಟ್‌ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

Chiranjeevi

Sampriya

ಹೈದರಾಬಾದ್ , ಸೋಮವಾರ, 8 ಏಪ್ರಿಲ್ 2024 (18:55 IST)
Photo Courtesy Facebook
ಹೈದರಾಬಾದ್: ತಮ್ಮ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ನಟ ಮೆಗಾಸ್ಟಾರ್ ಚಿರಂಜೀವಿ ಅವರು ₹ 5 ಕೋಟಿ ಚೆಕ್‌ನ್ನು ಗಿಫ್ಟ್‌ ಆಗಿ ನೀಡಿದ್ದಾರೆ.  

ಚಿರಂಜೀವಿ ಪ್ರಸ್ತುತ "ವಿಶ್ವಂಭರ" ಚಿತ್ರದಲ್ಲಿ ನಟಿಸುತ್ತಿದ್ದು, ಹೈದರಾಬಾದ್ ಹೊರವಲಯದ ಮುಚ್ಚಿಂತಲದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಶೂಟಿಂಗ್‌ ಸೆಟ್‌ಗೆ ಬಂದಿದ್ದ ತಮ್ಮ ಪವನ್‌ ಕಲ್ಯಾನ್ ಹಾಗೂ ನಾಗಬಾಬು ಅವರನ್ನು ಚಿರಂಜೀವಿ ಅವರು ಪ್ರೀತಿಯಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಚಿರಂಜೀವಿ ಅವರು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಆಶೀರ್ವಾದವಾಗಿ ₹ 5 ಕೋಟಿ ಚೆಕ್ ಅನ್ನು ಹಸ್ತಾಂತರಿಸಿದರು. ಭಾವುಕರಾದ ಪವನ್ ಕಲ್ಯಾಣ್ ಅವರು ತಮ್ಮ ಹಿರಿಯ ಸಹೋದರ ಚಿರಂಜೀವಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು.  ಸಹೋದರರು ಕೆಲಹೊತ್ತು ಮಾತುಕತೆಯಲ್ಲಿ ತೊಡಗಿದರು.

ನಿನ್ನೆ ಅನಕಾಪಲ್ಲಿಯಲ್ಲಿ ನಡೆದ ವಾರಾಹಿ ಸಮಾವೇಶದಲ್ಲಿ ಪವನ್ ಕಲ್ಯಾಣ್ ಪಾಲ್ಗೊಂಡಿದ್ದರು. ದೇವಿಯ ಆಶೀರ್ವಾದ ಕೋರಿ ಸಭೆಯಲ್ಲಿ ಪವನ್ ಕಲ್ಯಾಣ್ ಅವರು ಆಡಿದ ಕೆಲ ಮಾತುಗಳು ಚಿರಂಜೀವಿ ಅವರನ್ನು ಮನಸ್ಸನ್ನು ಕದಲಿಸಿದೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಪ್ರೇರೆಪಿಸುವ ನಿಟ್ಟಿನಲ್ಲಿ ಸಹೋದರ ಗಿಫ್ಟ್ ರೂಪದಲ್ಲಿ ದೇಣಿಗೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯತ್ನಾಳ್ ಹೇಳಿಕೆ ವಿರುದ್ಧ ಠಾಣೆ ಮೆಟ್ಟಿಲೇರಿದ ದಿನೇಶ್ ಗುಂಡೂರಾವ್ ಪತ್ನಿ