Publish Date: Thu, 13 Jul 2023 (16:44 IST)
Updated Date: Thu, 13 Jul 2023 (16:47 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ವಾರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಜಗನ್ ಸರ್ಕಾರ ನೇಮಿಸಿರುವ ಗ್ರಾಮ ಸ್ವಯಂ ಸೇವಕ ವ್ಯವಸ್ಥೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಗ್ರಾಮ ಸ್ವಯಂ ಸೇವಕ ವ್ಯವಸ್ಥೆ ಬಳಸಿಕೊಂಡು ಜಗನ್ ಸರ್ಕಾರ ಗ್ರಾಮಸ್ಥರ ಮಾಹಿತಿಗಳನ್ನು ಕದ್ದು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ 15 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಆರೋಪಿಸಿದ್ದರು.
ಪವನ್ ಹೇಳಿಕೆ ಖಂಡಿಸಿ ಗ್ರಾಮ ಸ್ವಯಂ ಸೇವಕರನ್ನು ಪ್ರತಿಭಟನೆ ಹಮ್ಮಿಕೊಂಡಿದ್ದರು. ಗ್ರಾಮ ಸ್ವಯಂ ಸೇವಕ ದಿಗಮಂಟಿ ಸುರೇಶ್ ಎಂಬವರು ದೂರು ಸಲ್ಲಿಸಿದ್ದರು. ಈ ಸಂಬಂಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪವನ್ ಗೆ ಬಂಧನದ ಭೀತಿ ಎದುರಾಗಿದೆ.