Select Your Language

Notifications

webdunia
webdunia
webdunia
webdunia

ಫೋನ್ ಕಿತ್ತುಕೊಂಡ ಅಭಿಮಾನಿ: ಕೂಲ್ ಆಗಿ ಹ್ಯಾಂಡಲ್ ಮಾಡಿದ ರಶ್ಮಿಕಾ ಮಂದಣ್ಣ

ಫೋನ್ ಕಿತ್ತುಕೊಂಡ ಅಭಿಮಾನಿ: ಕೂಲ್ ಆಗಿ ಹ್ಯಾಂಡಲ್ ಮಾಡಿದ ರಶ್ಮಿಕಾ ಮಂದಣ್ಣ
ಮುಂಬೈ , ಬುಧವಾರ, 12 ಜುಲೈ 2023 (08:30 IST)
ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಅಭಿಮಾನಿಗಳು ಸೆಲ್ಫೀಗಾಗಿ ಮುತ್ತಿಕೊಳ್ಳುವುದು ಸಾಮಾನ್ಯ.

ರಶ್ಮಿಕಾ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಕ್ಯಾರಾವಾನ್ ಹೊರಗಡೆ ಬಂದು ತಮ್ಮನ್ನು ಕಾಯುತ್ತಿದ್ದ ಅಭಿಮಾನಿಗಳಿಗೆ ಸೆಲ್ಫಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟಿಯನ್ನು ನೋಡಿದ ಖುಷಿಯಲ್ಲಿ ಕೊಂಚ ಅತಿರೇಕದ ವರ್ತನೆ ತೋರಿದ್ದ.

ರಶ್ಮಿಕಾ ಆತನ ಫೋನ್ ತೆಗೆದುಕೊಂಡು ಫೋಟೋ ತೆಗೆಯಲು ಪಕ್ಕದಲ್ಲಿದ್ದವರಿಗೆ ಫೋಟೋ ತೆಗೆಯಲು ಹೇಳುತ್ತಿದ್ದಾಗ ಆ ಅಭಿಮಾನಿ ರಶ್ಮಿಕಾ ಕೈಯಿಂದ ಸಡನ್ ಆಗಿ ಫೋಟೋ ಕಸಿದುಕೊಂಡಿದ್ದಾನೆ. ಆತನ ವರ್ತನೆಗೆ ಅರೆಕ್ಷಣ ರಶ್ಮಿಕಾ ಕಕ್ಕಾಬಿಕ್ಕಿಯಾದರೂ ಆತನ ಕಾತುರತೆ ಅರಿತುಕೊಂಡು ಸಾವರಿಸಿಕೊಂಡು ಮುಂದಿನ ಅಭಿಮಾನಿ ಜೊತೆ ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಲಂ ಚೇಂಬರ್ ಎದುರು ಕಿಚ್ಚ ಸುದೀಪ್ ಫ್ಯಾನ್ಸ್ ಪ್ರತಿಭಟನೆ