Publish Date: Tue, 11 Jul 2023 (09:00 IST)
Updated Date: Tue, 11 Jul 2023 (09:00 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಕರ್ನಾಟಕ ಮೂಲದವರಾದರೂ ಟಾಲಿವುಡ್, ಕಾಲಿವುಡ್, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದು, ಅಲ್ಲಿನ ಮನೆ ಮಗಳಂತೇ ಆಗಿದ್ದಾರೆ.
ಬಹುಭಾಷಾ ನಟಿಯಾಗಿ ಬೆಳೆದಿರುವ ರಶ್ಮಿಕಾಗೆ ಒಟ್ಟು ಎಷ್ಟು ಭಾಷೆ ಬರುತ್ತದೆ? ಇದನ್ನು ಅವರು ಇನ್ ಸ್ಟಾಗ್ರಾಂ ಪ್ರಶ್ನೋತ್ತರಾವಳಿಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಯೊಬ್ಬರು ನಿಮಗೆ ಒಟ್ಟು ಎಷ್ಟು ಭಾಷೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಲೆಕ್ಕ ಮಾಡಿ ಒಟ್ಟು ಆರು ಭಾಷೆ ಎಂದಿದ್ದಾರೆ.