Publish Date: Tue, 11 Jul 2023 (17:58 IST)
Updated Date: Tue, 11 Jul 2023 (18:03 IST)
ಬೆಂಗಳೂರು: ಹಣಕಾಸಿನ ವಿಚಾರದಲ್ಲಿ ನಿರ್ಮಾಪಕರು ಮಾಡಿರುವ ಆರೋಪಗಳ ವಿರುದ್ಧ ಕಿಚ್ಚ ಸುದೀಪ್ ಫ್ಯಾನ್ಸ್ ಇಂದು ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ನಿರ್ಮಾಪಕ ಎಂ.ಎನ್ ಕುಮಾರ್, ಸುರೇಶ್, ರೆಹಮಾನ್ ಪತ್ರಿಕಾಗೋಷ್ಠಿಗಳಲ್ಲಿ ಕಿಚ್ಚ ಸುದೀಪ್ ರಿಂದ ತಮಗೆ ನಷ್ಟವಾಗಿದೆ, ಹಣ ಮರಳಿಸಿಕೊಡಿ ಎಂದು ಆರೋಪ ಮಾಡಿದ್ದರು. ಇದರ ಬಗ್ಗೆ ಸುದೀಪ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಜೊತೆಗೆ ಫಿಲಂ ಚೇಂಬರ್ ಗೆ ಬಹಿರಂಗ ಪತ್ರ ಕೂಡಾ ಬರೆದಿದ್ದರು.
ಇದರ ಬೆನ್ನಲ್ಲೇ ಸುದೀಪ್ ಅಭಿಮಾನಿಗಳು ಇಂದು ಪ್ರತಿಭಟನೆ ನಡೆಸಿದ್ದು, ಆಧಾರ ರಹಿತವಾಗಿ ತಮ್ಮ ನೆಚ್ಚಿನ ನಟನ ವಿರುದ್ಧ ಆರೋಪ ಮಾಡಿರುವುದಕ್ಕೆ ನಿರ್ಮಾಪಕರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.