Publish Date: Thu, 13 Jul 2023 (09:10 IST)
Updated Date: Thu, 13 Jul 2023 (09:26 IST)
ಚೆನ್ನೈ: ದಳಪತಿ ವಿಜಯ್ ಸಿನಿಮಾಗಳಿಗೆ ಕೆಲವು ದಿನ ಬ್ರೇಕ್ ಕೊಟ್ಟು ರಾಜಕೀಯ ಸೇರಲಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ.
ರಾಜಕೀಯ ಪಕ್ಷ ಸೇರುತ್ತಾರೋ ಅಥವಾ ತಾವೇ ಹೊಸ ಪಕ್ಷ ಕಟ್ಟುತ್ತಾರೋ ಎಂಬುದು ಗೊತ್ತಾಗಿಲ್ಲ. ಆದರೆ ಇತ್ತೀಚೆಗೆ ವಿಜಯ್ ಮಕ್ಕಳ್ ಐಕ್ಯಂ ಪಕ್ಷದ ನಾಯಕರನ್ನು ಭೇಟಿಯಾಗಿರುವುದು ಅವರು ಆ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.
ಇದೀಗ ತಮ್ಮ ರಾಜಕೀಯ ಜೀವನ ಆರಂಭಕ್ಕೆ ಮೊದಲು ಇಡೀ ರಾಜ್ಯದಲ್ಲಿ ಪಾದಯಾತ್ರೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪಾದಯಾತ್ರೆ ಮೂಲಕ ಜನರ ನಾಡಿಮಿಡಿತ ಅರಿತು ಬಳಿಕ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿದೆ.