Publish Date: Thu, 13 Jul 2023 (09:00 IST)
Updated Date: Thu, 13 Jul 2023 (09:21 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರವಾಹಿಯ ಶಿವರಾಮ ಪಾತ್ರಧಾರಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ?
ಅಚ್ಚ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಾ ಶಿವರಾಮನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ರಿತ್ವಿಕ್ ಮಠದ್ ಈಗ ಹೊಸ ಸಿನಿಮಾಗೆ ನಾಯಕರಾಗಿದ್ದಾರೆ. ಗಿಣಿರಾಮ ಧಾರವಾಹಿ ಮುಗಿದ ಬಳಿಕ ಮುಂದೆ ಬೆಳ್ಳಿತೆರೆಗೆ ಎಂಟ್ರಿಕೊಡುವುದಾಗಿ ರಿತ್ವಿಕ್ ಹೇಳಿದ್ದರು.
ಅದರಂತೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಇದಕ್ಕೆ ಉತ್ಸವ ಎನ್ನುವ ಟೈಟಲ್ ಘೋಷಣೆಯಾಗಿದೆ. ಈಗಾಗಲೇ ಶೂಟಿಂಗ್ ಕೂಡಾ ಮುಗಿದಿದೆಯಂತೆ. ಹೊಸಬರೇ ತಂತ್ರಜ್ಞರಾಗಿರುವ ಸಿನಿಮಾ ಲವ್ ಸ್ಟೋರಿ ಒಳಗೊಂಡಿದೆ. ಅಂದ ಹಾಗೆ ರಿತ್ವಿಕ್ ಗೆ ಇದು ಮೂರನೇ ಸಿನಿಮಾವಾಗಿದೆ.