Publish Date: Wed, 12 Jul 2023 (08:40 IST)
Updated Date: Wed, 12 Jul 2023 (08:55 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು 61 ನೇ ಜನ್ಮದಿನದ ಸಂಭ್ರಮ. ಅವರ ಮನೆ ಮುಂದೆ ನಿನ್ನೆ ಮಧ್ಯರಾತ್ರಿಯಿಂದಲೇ ಜನ ಜಮಾಯಿಸಿದ್ದರು.
ಮಧ‍್ಯರಾತ್ರಿ 11 ಗಂಟೆಯಿಂದಲೇ ಜನ ನಾಗವಾರದ ಶಿವಣ್ಣ ಮನೆ ಮುಂದೆ ಅಭಿಮಾನಿಗಳು ಸೇರಿದ್ದು ಪಟಾಕಿ ಸಿಡಿಸಿ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಇಂದು ಶಿವಣ್ಣನ ಹುಟ್ಟುಹಬ್ಬದ ಅಂಗವಾಗಿ ಅವರು ನಾಯಕರಾಗಿರುವ ಘೋಸ್ಟ್ ಸಿನಿಮಾದ ಪೋಸ್ಟರ್, ಟೀಸರ್ ರಿಲೀಸ್ ಆಗಲಿದೆ. ಇದೀಗ ಶಿವಣ್ಣ ತಮಿಳಿನ ಜೈಲರ್, ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಸಿನಿಮಾದ ಪೋಸ್ಟರ್ ಕೂಡಾ ಹೊರಬೀಳುವ ನಿರೀಕ್ಷೆಯಿದೆ.