Select Your Language

Notifications

webdunia
webdunia
webdunia
Monday, 7 April 2025
webdunia

ಯತ್ನಾಳ್ ಹೇಳಿಕೆ ವಿರುದ್ಧ ಠಾಣೆ ಮೆಟ್ಟಿಲೇರಿದ ದಿನೇಶ್ ಗುಂಡೂರಾವ್ ಪತ್ನಿ

Minister Dinesh Gunduram Wife Tabu Rao

Sampriya

ಬೆಂಗಳೂರು , ಸೋಮವಾರ, 8 ಏಪ್ರಿಲ್ 2024 (17:02 IST)
Photo Courtesy X
ಬೆಂಗಳೂರು:  ಸಚಿವ ದಿನೇಶ್‌ ಗುಂಡೂರಾವ್‌ ಮನೆಯಲ್ಲಿಅರ್ಧ ಪಾಕಿಸ್ತಾನ ಇದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಯತ್ನಾಳ್‌ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಟಬು ಅವರು ದೂರು ದಾಖಲಿಸಿದ್ದಾರೆ.

ನಂತರ ಮಾತನಾಡಿದ ಅವರು, ನಾನು ರಾಜಕೀಯದಲ್ಲಿಲ್ಲ. ಅನಗತ್ಯವಾಗಿ ನಮ್ಮ ಕುಟುಂಬದ ನಿಂದನೆ ಮಾಡಿರುವುದು ಸರಿಯಲ್ಲ. ರಾಜಕೀಯ ವಿಚಾರವಾಗಿ ದಿನೇಶ್ ಗುಂಡೂರಾವ್ ಜತೆ ಮಾತುಕತೆ
ನಡೆಸಲಿ. ಅದನ್ನು ಬಿಟ್ಟು ವೈಯ್ಯಕ್ತಿಕ ವಿಷಯವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಾನು ಆರ್. ಗುಂಡೂರಾವ್ ಫೌಂಡೇಷನ್ ಮೂಲಕ ಜಾತಿ ಭೇದವಿಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಈ ಫೌಂಡೇಶನ್ ಮೂಲಕ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳನ್ನ  ಕೈಗೊಂಡಿದ್ದೇನೆ. ಹಿಂದು, ಮುಸ್ಲಿಂ ಎನ್ನದೇ ಎಲ್ಲ ಸಮಾಜದವರನ್ನು ಸಮಾನವಾಗಿ ನೋಡುವ ದೃಷ್ಟಿಕೋನ ಹೊಂದಿದವಳು ನಾನು. ಗಾಂಧೀ ನಗರದ ಜನತೆಗೆ ನಾನು ಕಳೆದ 25 ವರ್ಷಗಳಿಂದ ಚಿರಪರಿತ. ನಮ್ಮ ಕುಟುಂಬ ಗೌರವಯುತವಾಗಿ ಜನರ ಪರ ಕಾರ್ಯಗಳನ್ನ ನಡೆಸಿಕೊಂಡು ಬಂದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆ ಪ್ರಚಾರ ವೇಳೆ ಯಡವಟ್ಟು: ಓರ್ವನ ಸಾವು