Select Your Language

Notifications

webdunia
webdunia
webdunia
webdunia

ದಿನೇಶ್‌ ಗುಂಡೂರಾವ್‌ ಮನೆಯಲ್ಲೇ ಅರ್ಧ ಪಾಕಿಸ್ತಾನವಿದೆ ಎಂದ ಬಸನಗೌಡ ಪಾಟೀಲ್

ದಿನೇಶ್‌ ಗುಂಡೂರಾವ್‌ ಮನೆಯಲ್ಲೇ ಅರ್ಧ ಪಾಕಿಸ್ತಾನವಿದೆ ಎಂದ ಬಸನಗೌಡ ಪಾಟೀಲ್

Sampriya

ವಿಜಯಪುರ , ಶನಿವಾರ, 6 ಏಪ್ರಿಲ್ 2024 (16:50 IST)
Photo Courtesy X
ವಿಜಯಪುರ: ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ದೇಶ ವಿರೋಧಿ ಹೇಳಿಕೆ ನೀಡುವುದು ಚಟವಾಗಿದ್ದು, ಅವರ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

‌ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ನಾಯಕನನ್ನು ಬಂಧಿಸಿದೆ. ಅದಲ್ಲದೆ ಈ ಸ್ಫೋಟದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ದಿನೇಶ್‌ ಗುಂಡೂರಾವ್ ಅವರು ಗಂಭೀರ ಆರೋಪ ಮಾಡಿದ್ದರು.

ಈ ಬಗ್ಗೆ ವಿಜಯಪುರದ ಬಿಜೆಪಿ ಕಚೇರಿ ಬಳಿ ಪ್ರತಿಕ್ರಿಯಿಸಿದ ಬಸವನಗೌಡ ಪಾಟೀಲ್ ಅವರು, ನಮ್ಮ ಪದಾಧಿಕಾರಿ ಮೊಬೈಲ್ ಸಿಮ್ ವ್ಯಾಪಾರಿಗಳಿದ್ದಾರೆ. ಅವರ ಬಳಿ ಯಾರು ಬಂದಿರುತ್ತಾರೆ ಏನು ಗೊತ್ತಾಗುತ್ತದೆ. ಬಿಜೆಪಿ, ಕಾಂಗ್ರೆಸ್ ಇರಲಿ, ಯಾರೇ ಇರಲಿ ತನಿಖೆಗೆ ಸಹಕಾರ ನೀಡೋದಾಗಿ ಹೇಳಿದ್ದಾನೆ ಎಂದು ಹೇಳಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಾಕ್ಷಿ ವಿಚಾರಣೆ ಸಲುವಾಗಿ ಬಿಜೆಪಿ ಮುಖಂಡನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದರ ಬಗ್ಗೆ ಬಿಜೆಪಿ ಮೇಲೆ  ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು.  ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕನ ಬಂಧನದ ಮೂಲಕ ಇದರಲ್ಲಿ ಕೇಸರಿ ಪಡೆ ಶಾಮೀಲಾಗಿರುವುದು ಗೊತ್ತಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಲೆಕ್ಸಾ ಸಾಧನದಿಂದ ಕೋತಿ ದಾಳಿಯಿಂದ ತಪ್ಪಿಸಿಕೊಂಡ ಸಹೋದರಿಯರು: ಭಲೇ ಎಂದಾ ಪೋಷಕರು