Select Your Language

Notifications

webdunia
webdunia
webdunia
webdunia

ಸಾಯಿ ಪ್ರಸಾದ್ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಯಲ್ಲ, ಸ್ಪಷ್ಟನೆ ಕೊಟ್ಟ ಎನ್‌ಐಎ

ಸಾಯಿ ಪ್ರಸಾದ್ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಯಲ್ಲ, ಸ್ಪಷ್ಟನೆ ಕೊಟ್ಟ ಎನ್‌ಐಎ

Sampriya

ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2024 (23:13 IST)
ಬೆಂಗಳೂರು:  ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮುಖಂಡನ ವಿಚಾರಣೆ ಬಗ್ಗೆ ಉದ್ಭವಿಸಿದ ಗೊಂದಲದ ಬಗ್ಗೆ ಎನ್‌ಐಎ ಸ್ಪಷ್ಟನೆ ನೀಡಿದೆ.

ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ರನ್ನು  ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿತ್ತು. ‌

ಕಾಂಗ್ರೆಸ್‌ ಸಚಿವ ದಿನೇಶ್‌ ಗುಂಡೂರಾವ್‌ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್‌ನ ಹ್ಯಾಂಡಲ್‌ಗಳು ಕೂಡ ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ಪಾತ್ರವಿದೆ ಎಂದೂ ಟ್ವೀಟ್‌ ಮಾಡಿದ್ದರು.

ಇದರ ಬೆನ್ನಲ್ಲಿಯೇ ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕಟಣೆ ನೀಡಿ ಸ್ಪಷ್ಟೀಕರಣ ನೀಡಿದ್ದು, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನನ್ನು ಈಗಾಗಲೇ ಎನ್‌ಐಎ ವಿಚಾರಣೆ ಮಾಡಿದೆ. ಇಬ್ಬರನ್ನು ಪ್ರಕರಣ ಸಾಕ್ಷಿಗಳನ್ನಾಗಿ ಮಾಡಲು ಎನ್ ಐ ಎನಿಂದ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟಿಕರಣ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತವರಿನಲ್ಲಿ ಅಬ್ಬರಿಸಿದ ಸನ್‌ರೈಸರ್ಸ್, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲು