Select Your Language

Notifications

webdunia
webdunia
webdunia
webdunia

ತವರಿನಲ್ಲಿ ಅಬ್ಬರಿಸಿದ ಸನ್‌ರೈಸರ್ಸ್, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲು

IPL

Sampriya

ಹೈದರಾಬಾದ್ , ಶುಕ್ರವಾರ, 5 ಏಪ್ರಿಲ್ 2024 (23:00 IST)
Photo Courtesy X
ಹೈದರಾಬಾದ್: ಎಲ್ಲ ವಿಭಾಗಗಳಲ್ಲೂ ಸಾಂಘಿಕ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವೂ ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ಗೆ ಹಿಡಿದ ಋತುರಾಜ್ ಗಾಯಕ್‌ವಾಡ್ ನಾಯಕತ್ವದ ಚೆನ್ನೈ ತಂಡವೂ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಸೇರಿಸಿತು. ಅಜಿಂಕ್ಯಾ ರಹಾನೆ 35, ಶಿವಂ ದುಬೆ 45, ರವೀಂದ್ರಾ ಜಡೆಜಾ 31 ರನ್ ಗಳಿಸಿ ಚೆನ್ನೈ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಈ ಸಾಧರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಪ್ಯಾಟ್‌ಕಮಿನ್ಸ್‌ ನಾಯಕತ್ವದ ಹೈದರಾಬಾದ್ ತಂಡವೂ ಉತ್ತಮ ಆರಂಭ ಪಡೆಯಿತು.

ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾಮೊದಲ ವಿಕೆಟ್‌ಗೆ 16 ಎಸೆತಗಳಲ್ಲಿ 46ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ 37ರನ್ ಗಳಿಸಿ ಅಬ್ಬರಿಸಿದರು. ನಂತರದಲ್ಲಿ ಐಡನ್ ಮರ್ಕರಮ್ ಅರ್ಧ ಶತಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಅವರು 36 ಎಸೆತಗಳಲ್ಲಿ  50ರನ್ ಗಳಿಸಿದರು. ತಂಡವೂ ಇನ್ನೂ 11 ಎಸೆತ ಬಾಕಿ ಇರುವಂತೆ ಗೆಲುವಿನ ದಡವನ್ನು ತಲುಪಿತು

Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಮುಖಂಡನ ವಿಚಾರಣೆ: ಧರ್ಮದ ಹೆಸರಿನಲ್ಲಿ ಕೇಸರಿ ಭಯೋತ್ಪಾದನೆ ಎಂದ ದಿನೇಶ್ ಗುಂಡೂರಾವ್