Select Your Language

Notifications

webdunia
webdunia
webdunia
webdunia

ಶಶಾಂಕ್‌ ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌: ಪಂಜಾಬ್‌ಗೆ ರೋಚಕ ಗೆಲುವು

ಶಶಾಂಕ್‌ ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌: ಪಂಜಾಬ್‌ಗೆ ರೋಚಕ ಗೆಲುವು

Sampriya

ಅಹಮದಾಬಾದ್ , ಶುಕ್ರವಾರ, 5 ಏಪ್ರಿಲ್ 2024 (10:08 IST)
Photo Courtesy X
ಅಹಮದಾಬಾದ್: ಅಗ್ರ ಬ್ಯಾಟರ್‌ಗಳ ವೈಫಲ್ಯದಿಂದ ಕುಸಿತಕ್ಕೊಳಗಾದ ಪಂಜಾಬ್‌ ಕಿಂಗ್‌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶಕ್ತಿತುಂಬಿದ ಶಶಾಂಕ್‌ ಸಿಂಗ್‌ (ಔಟಾಗದೆ 61) ಗೆಲುವಿನ ರೂವಾರಿಯಾದರು. ಹೀಗಾಗಿ, ಜಯದ ಸನಿಹದಲ್ಲಿದ್ದ ಗುಜರಾಟ್‌ ಟೈಟನ್ಸ್‌ ತಂಡವನ್ನು ಮಣಿಸಿ ಶಿಖರ್‌ ಧವನ್‌ ಪಡೆಯು ಮೂರು ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.

ಗುರುವಾರ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಟೈಟನ್ಸ್ ತಂಡವು ನಾಯಕ ಶುಭಮನ್‌ ಗಿಲ್ (ಅಜೇಯ 89) ಅವರ ಅಮೋಘ ಆಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಈ ಗುರಿಯನ್ನು ಕೊನೆಯ ಒಂದು ಎಸೆತ ಬಾಕಿ ಇರುವಂತೆ ಪಂಜಾಬ್‌ ತಂಡವು ಗಡಿ ದಾಟಿತು.
 

ಪಂಜಾಬ್‌ ತಂಡವು 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶಿಖರ್‌ , ಜಾನಿ ಬೇಸ್ಟೊ ), ಸ್ಯಾಮ್ ಕರನ್ ಮತ್ತು ಸಿಕಂದರ್‌ ರಝಾ ಬೇಗನೇ ಔಟಾದರು. ಈ ಹಂತದಲ್ಲಿ ಶಶಾಂಕ್‌ ಉತ್ತಮವಾಗಿ ಇನಿಂಗ್ಸ್‌ ಕಟ್ಟಿದರು. ಅವರಿಗೆ ಅಶುತೋಷ್‌ ಶರ್ಮಾ ಮತ್ತು ಪ್ರಭಸಿಮ್ರನ್‌ ಸಿಂಗ್‌ ಸಾಥ್‌ ನೀಡಿದರು. ಹೀಗಾಗಿ, ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

ಪಂಜಾಬ್‌ ತಂಡಕ್ಕೆ ಈ ಆವೃತ್ತಿಯಲ್ಲಿ ಇದು ಎರಡನೇ ಗೆಲುವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಕಿಂಗ್ಸ್‌ ತಂಡವು 7ರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಟೈಟನ್ಸ್‌ ತಂಡವು ಐದನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾಕ್ಕೆ ಮಣಿದ ಕ್ಯಾಪಿಟಲ್ಸ್‌: ಅಗ್ರಸ್ಥಾನಕ್ಕೆ ಜಿಗಿದ ನೈಟ್‌ ರೈಡರ್ಸ್‌