Select Your Language

Notifications

webdunia
webdunia
webdunia
webdunia

ಗುಜರಾತ್‌ ಟೈಟನ್ಸ್‌ಗೆ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಜಯ

Indian Premier League

Sampriya

, ಭಾನುವಾರ, 31 ಮಾರ್ಚ್ 2024 (21:05 IST)
ಅಹಮದಾಬಾದ್‌: ಇಂದು ನಡೆದ  ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಟೈಟನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ವಿರುದ್ಧ 7 ವಿಕೆಟ್ ಅಂತರದ ರೋಚಕ ಗೆಲುವು ಪಡೆದುಕೊಂಡಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡವು 163 ರನ್‌ಗಳ ಗುರಿಯನ್ನು  ಟೈಟನ್ಸ್‌ಗೆ ನೀಡಿತು.

ಗುಜರಾತ್‌ ಟೈಟನ್ಸ್‌ನ  ನಾಯಕ ಶುಭಮನ್‌ ಗಿಲ್‌ (36) ಮತ್ತು ವೃದ್ಧಿಮಾನ್ ಸಹಾ (25) ಉತ್ತಮ ಆರಂಭ ನೀಡಿದರು. ಸಾಯಿ ಸುದರ್ಶನ್‌ ಹಾಗೂ ಡೇವಿಡ್‌ ಮಿಲ್ಲರ್‌ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 64 ರನ್ ಸೇರಿಸಿದರು.

ಸುದರ್ಶನ್‌ 36 ಎಸೆತಗಳಲ್ಲಿ 45 ರನ್‌ ಗಳಿಸಿದರೆ, ಮಿಲ್ಲರ್ 27 ಎಸೆತಗಳಲ್ಲಿ ಅಜೇಯ 44 ರನ್‌ ಗಳಿಸಿ, ತಂಡಕ್ಕೆ ಜಯದ ನಗು ತಂದುಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್ ದಂಪತಿ: ಸುಳಿವು ಕೊಟ್ಟ ಸುನಿಲ್ ಶೆಟ್ಟಿ