Select Your Language

Notifications

webdunia
webdunia
webdunia
webdunia

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್ ದಂಪತಿ: ಸುಳಿವು ಕೊಟ್ಟ ಸುನಿಲ್ ಶೆಟ್ಟಿ

KL Rahul
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಸ್ವತಃ ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಸುಳಿವು ಕೊಟ್ಟಿದ್ದಾರೆ.

ಹಿಂದಿ ಖಾಸಗಿ ವಾಹಿನಿಯ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋನಲ್ಲಿ ಸುನಿಲ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ ತಾತನಾಗುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸುನಿಲ್ ಶೆಟ್ಟಿ ‘ಮುಂದಿನ ಸೀಸನ್ ಗೆ ಬರುವಾಗ ನಾನು ಅಜ್ಜನಂತೇ ಓಡಾಡುತ್ತೇನೆ’ ಎಂದಿದ್ದಾರೆ.

ಅವರ ಈ ಮಾತು ಕೇಳಿದ ಬಳಿಕ ಅಥಿಯಾ ಗರ್ಭಿಣಿಯಿರಬಹುದೇ ಎಂದು ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಇತ್ತೀಚೆಗೆ ಐಪಿಎಲ್ ಪಂದ್ಯವೊಂದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಗೆ ಬೆಂಬಲಿಸಲು ಅಥಿಯಾ ಮೈದಾನಕ್ಕೆ ಬಂದಿದ್ದರು. ಇದರ ಹೊರತಾಗಿ ಅವರು ಯಾವುದೇ ಸಿನಿಮಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಗರ್ಭಿಣಿಯಿರಬಹುದು ಎಂದು ಅನುಮಾನ ಮೂಡಿದೆ.

ಹಲವು ಸಮಯ ಡೇಟಿಂಗ್ ಮಾಡಿದ್ದ ಈ ಜೋಡಿ ಕಳೆದ ವರ್ಷವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂಬ ಸುದ್ದಿ ಓಡಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್