Publish Date: Sat, 30 Mar 2024 (16:11 IST)
Updated Date: Sat, 30 Mar 2024 (16:21 IST)
ಬೆಂಗಳೂರು: ಇಲ್ಲಿನ ಕಂಠೀರವ ಸ್ಡೇಡಿಯಂನಲ್ಲಿ ನಡೆದ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್‌ಗಳೊಂದಿಗೆ ರೋಚಕ ಜಯವನ್ನು ಸಾಧಿಸಿತು.
ಇನ್ನೂ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಅಮೋಘ ಬ್ಯಾಟಿಂಗ್ ಮಾಡಿ ಅರ್ಧಶತಕವನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇನ್ನೂ ಆಟದ ಮಧ್ಯಭಾಗದಲ್ಲಿ ವೆಂಕಟೇಶ್ ಅಯ್ಯರ್ ಅವರು ತೀವ್ರವಾದ ಬೆನ್ನಿನ ನೋವನ್ನು ಅನುಭವಿಸಿದರು. ಈ ವೇಳೆ ವೈದ್ಯರಿಂದ ತಪಾಸಣೆಗೂ ಒಳಗಾದರು.
ಈ ಬಗ್ಗೆ ಗೆಲುವಿನ ನಂತರ ಮಾತನಾಡಿದ ವೆಂಕಟೇಶ್ ಅಯ್ಯರ್ ಅವರು ತಮ್ಮ ಬೆನ್ನಿನ ಗಾಯದ ಬಗ್ಗೆ ಹೇಳಿಕೊಂಡರು. ನನ್ನ ಬೆನ್ನಿನ ಆರೋಗ್ಯದ ಬಗ್ಗೆ ಸ್ಕ್ಯಾನ್ ಮಾಡಬೇಕಾಗಿದೆ ಎಂದು ಬಹಿರಂಗಪಡಿಸಿದರು. ಇದು ಸ್ವಲ್ಪ ಜಾಕ್ ಆಗಿದೆ, ಹೋಗಿ ಸ್ಕ್ಯಾನ್ ಮಾಡಬೇಕಾಗಿದೆ ಎಂದು ಹೇಳಿಕೊಂಡರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 182 ರನ್‌ಗಳ ಗುರಿಯನ್ನು ಕೆಕೆಆರ್‌ಗೆ ನೀಡಿತು. 183 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಆರಂಭಿಕರಾದ ಫಿಲ್ ಸಾಲ್ಟ್ (30) ಮತ್ತು ಸುನಿಲ್ ನರೈನ್ (47) ಅವರ ಉತ್ತಮ ಆರಂಭವನ್ನು ತಂದುಕೊಟ್ಟರು.
ಇನ್ನೂ ವೆಂಕಟೇಶ್ ಅಯ್ಯರ್ 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 50 ರನ್ ಗಳಿಸಿದರು. ಇದೇ ವೇಳೆ ಕೆಕೆಆರ್ ಪರ ಶ್ರೇಯಸ್ ಅಯ್ಯರ್ (39*) ಮತ್ತು ರಿಂಕು ಸಿಂಗ್ (5*) ಮೊತ್ತದೊಂದಿಗೆ ರೋಚಕ ಜಯ ಸಾಧಿಸಿತು.