Select Your Language

Notifications

webdunia
webdunia
webdunia
webdunia

ಕೋಲ್ಕತ್ತಾಕ್ಕೆ ಮಣಿದ ಕ್ಯಾಪಿಟಲ್ಸ್‌: ಅಗ್ರಸ್ಥಾನಕ್ಕೆ ಜಿಗಿದ ನೈಟ್‌ ರೈಡರ್ಸ್‌

ಕೋಲ್ಕತ್ತಾಕ್ಕೆ ಮಣಿದ ಕ್ಯಾಪಿಟಲ್ಸ್‌: ಅಗ್ರಸ್ಥಾನಕ್ಕೆ ಜಿಗಿದ ನೈಟ್‌ ರೈಡರ್ಸ್‌

Sampriya

ವಿಶಾಖಪಟ್ಟಣ , ಗುರುವಾರ, 4 ಏಪ್ರಿಲ್ 2024 (10:04 IST)
Photo Courtesy X
ವಿಶಾಖಪಟ್ಟಣ: ಐ‍ಪಿಎಲ್‌ ಟೂರ್ನಿಯಲ್ಲಿಯೇ ಎರಡನೇ ದೊಡ್ಡ ಮೊತ್ತವನ್ನು ದಾಖಲಿಸಿದ ಕೋಲ್ಕತ್ತಾ ನೈಟ್‌ ರೈಸರ್ಸ್‌ ತಂಡವು  106 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ನೈಟ್‌ ರೈಡರ್ಸ್‌ ಬಳಗ 7 ವಿಕೆಟ್‌ಗೆ 272 ರನ್‌ಗಳ ಭಾರಿ ಮೊತ್ತ ಕಲೆಹಾಕಿತು. ವೆಸ್ಟ್‌ ಇಂಡೀಸ್‌ ಆಟಗಾರ ನರೈನ್‌ ನಾರಾಯಣ್‌ ಮತ್ತು ‌ರಘುವಂಶಿ ಅರ್ಧಗಳಿಸಿದರು. ಕೋಲ್ಕತ್ತ ಬ್ಯಾಟರ್‌ಗಳು ಒಟ್ಟು 18 ಸಿಕ್ಸರ್‌ಗಳು ಮತ್ತು 22 ಬೌಂಡರಿಗಳನ್ನು ಬಾರಿಸಿ, ಡೆಲ್ಲಿ ಬೌಲರ್‌ಗಳನ್ನು ಕಾಡಿದರು.

ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೋಲ್ಕತ್ತಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. 33 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ತಂಡವು 17.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟ್‌ ಆಯಿತು.

ಹ್ರಾಟ್ರಿಕ್‌ ಗೆಲುವಿನೊಂದಿಗೆ ಕೋಲ್ಕತ್ತಾ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿತು. ರಿಷಭ್‌ ಪಂತ್‌ ಸಾರಥ್ಯದ ಡೆಲ್ಲಿ ತಂಡವು 9ನೇ ಸ್ಥಾನಕ್ಕೆ ಜಾರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್‌: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಕೋಲ್ಕತ್ತ ರೈಡರ್ಸ್ ಬ್ಯಾಟಿಂಗ್ ಆಯ್ಕೆ