Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಪಂದ್ಯ ಮುಗಿದ ಬಳಿಕ ಧೋನಿಗೆ ಮುತ್ತಿಗೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು

MS Dhoni

Krishnaveni K

ವಿಶಾಖಪಟ್ಟಣಂ , ಸೋಮವಾರ, 1 ಏಪ್ರಿಲ್ 2024 (13:58 IST)
Phot Courtesy: CSK

ವಿಶಾಖಪಟ್ಟಣಂ: ಐಪಿಎಲ್ 2024 ರಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಡೆಲ್ಲಿ ಆಟಗಾರರು ಧೋನಿ ಬಳಿ ಸಲಹೆ ಸೂಚನೆ ಕೇಳುತ್ತಿದ್ದರು.


ಪ್ರತೀ ಪಂದ್ಯ ಮುಗಿದ ಬಳಿಕವೂ ಯುವ ಆಟಗಾರರು ಧೋನಿ ಬಳಿಕ ಬಂದು ಸಲಹೆ ಪಡೆಯುವುದು ಸಾಮಾನ್ಯ. ನಿನ್ನೆಯ ಪಂದ್ಯದಲ್ಲಿಯೂ ಅದೇ ನಡೆದಿದೆ. ಧೋನಿ ನಿನ್ನೆ ಅಜೇಯರಾಗಿ 37 ರನ್ ಗಳಿಸಿದ್ದರು. ಅವರ ಸಿಡಿಲಬ್ಬರ ಬ್ಯಾಟಿಂಗ್ ಹೊರತಾಗಿಯೂ ಸಿಎಸ್ ಕೆ ಪಂದ್ಯ ಸೋತಿತ್ತು.

ಆದರೆ ಧೋನಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುವಾಗ ಡೆಲ್ಲಿ ವೇಗಿ ಇಶಾನ್ ಕಿಶನ್ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಡೆಲ್ಲಿಯ ಕೆಲವು ಆಟಗಾರರು ಧೋನಿಗೆ ಮುತ್ತಿಕೊಂಡು ಪಾಠ ಹೇಳಿಸಿಕೊಂಡಿದ್ದಾರೆ. ಇದು ಇಷ್ಟಕ್ಕೇ ಮುಗಿಯಲಿಲ್ಲ.

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಕೂಡಾ ಆಗಿರುವ ಡೆಲ್ಲಿ ತಂಡದ ಕುಲದೀಪ್ ಯಾದವ್ ಧೋನಿ ಬಳಿ ಸುದೀರ್ಘ ಮಾತುಕತೆ ನಡೆಸಿದರು. ಧೋನಿ ನಾಯಕತ್ವದಲ್ಲೇ ಕುಲದೀಪ್ ಟೀಂ ಇಂಡಿಯಾದಲ್ಲಿ ಬೆಳಕಿಗೆ ಬಂದಿದ್ದರು. ಧೋನಿಯನ್ನು ಕುಲದೀಪ್ ಅಷ್ಟೇ ಗೌರವದಿಂದ ನೋಡುತ್ತಾರೆ. ಇದೀಗ ಐಪಿಎಲ್ ಪಂದ್ಯದ ವೇಳೆಯೂ ತಮ್ಮ ಐಡಲ್ ನಿಂದ ಸಲಹೆ ಪಡೆದಿದ್ದಾರೆ ಕುಲದೀಪ್‍.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮುಂಬೈಯಲ್ಲಿ ರೋಹಿತ್ ಫ್ಯಾನ್ಸ್ ಮುಂದೆ ಹಾರ್ದಿಕ್ ಪಾಂಡ್ಯ ಕತೆಯೇನೋ