Publish Date: Sat, 19 Sep 2020 (09:53 IST)
Updated Date: Sat, 19 Sep 2020 (17:58 IST)
ಥಾಣೆ : ಅಪ್ರಾಪ್ತೆಯನ್ನು ಅಪಹರಿಸಿ ಮಾನಭಂಗ ಎಸಗಿದ ಹಿನ್ನಲೆಯಲ್ಲಿ 19 ವರ್ಷದ ಯುವಕನನ್ನು ಥಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
16 ವರ್ಷದ ಸಂತ್ರಸ್ತೆಗೆ ಥಾಣೆ ಮುನ್ಸಿಪಾಲ್ ಕಾರ್ಪೋರೇಷನ್ ಗುತ್ತಿಗೆ ಕೆಲಸ ಮಾಡುತ್ತಿದ್ದ ಆರೋಪಿಯೊಂದಿಗೆ ಸ್ನೇಹವಾಗಿತ್ತು. ಆರೋಪಿ ಇದನ್ನೇ ದುರುಪಯೋಗಪಡಿಸಿಕೊಂಡು ಹುಡುಗಿಯನ್ನು ಉಸ್ಮಾನಾಬಾದ್ ಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ.
ಈ ವಿಚಾರ ಆಕೆಯ ಪೋಷಕರಿಗೆ ತಿಳಿದ ಹಿನ್ನಲೆಯಲ್ಲಿ ಅವರು ಥಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.