Publish Date: Mon, 14 Sep 2020 (07:48 IST)
Updated Date: Mon, 14 Sep 2020 (10:24 IST)
ಹೈದರಾಬಾದ್ : 19 ವರ್ಷದ ಯುವತಿಯನ್ನು ಮೂವರು ಅಪ್ರಾಪ್ತ ಹುಡುಗರು ಸೇರಿ ಮಾನಭಂಗ ಎಸಗಿದ ಘಟನೆ ತೆಲಂಗಾಣದ ರೆಡ್ಡಿ ಜಿಲ್ಲೆಯ ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ತನ್ನ ಸ್ನೇಹಿತರನ್ನು ಭೇಟಿಯಾಗಿ ಮನೆಗೆ ಹಿಂತಿರುಗಲು ಆಟೋ ಹತ್ತಿದ್ದಾಳೆ. ಅಲ್ಲಿಗೆ ಬಂದ ಇಬ್ಬರು ಹುಡುಗರು ಆಟೋ ಹತ್ತಿಕೊಂಡು ಆಕೆಯನ್ನು ಚುಡಾಯಿಸಿ ಆಕೆ ಆಟೋದಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಆಟೋದಿಂದ ಇಳಿದ ಯುವತಿನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲಿ ಮತ್ತೊಬ್ ಹುಡುಗ ಬಂದಿದ್ದು ಮೂವರು ಸೇರಿ ಅತ್ಯಾಚಾರ ಎಸಗಿದ್ದಾರೆ.
ಈ ಬಗ್ಗೆ ಯುವತಿ ತಾಯಿಯೊಂದಿಗೆ ಸೇರಿ ರಾಚಕೊಂಡ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.