Publish Date: Sun, 13 Sep 2020 (21:44 IST)
Updated Date: Sun, 13 Sep 2020 (21:46 IST)
ಮಹಾರಾಷ್ಟ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿಯಾದ ನಟಿ ಕಂಗನಾ ರಣಾವತ್ ತಮ್ಮ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ವಿವರಣೆ ಕೊಟ್ಟಿದ್ದಾರೆ.
ಬಾಂದ್ರಾದಲ್ಲಿರುವ ತಮ್ಮ ಕಚೇರಿಯನ್ನು ಬಿಎಂಸಿ ಭಾಗಶಃ ಕೆಡವಿದೆ. ವಿನಾಕಾರಣ ಬೆದರಿಕೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ.
ಅಲ್ಲದೇ ರಾಜ್ಯಪಾಲರನ್ನು ಭೇಟಿಯಾಗಿ ಬಂದ ಬಳಿಕ ವಿಡಿಯೋ ಶೇರ್ ಮಾಡಿದ್ದಾರೆ.
"ಸ್ವಲ್ಪ ಸಮಯದ ಹಿಂದೆ ನಾನು ಮಹಾರಾಷ್ಟ್ರದ ಗವರ್ನರ್ ಶ್ರೀ ಭಗತ್ ಸಿಂಗ್ ಕೊಶಿಯಾರಿ ಜಿ ಅವರನ್ನು ಭೇಟಿಯಾದೆ. ನನ್ನ ದೃಷ್ಟಿಕೋನವನ್ನು ಅವರಿಗೆ ವಿವರಿಸಿದ್ದೇನೆ ಮತ್ತು ನ್ಯಾಯ ಒದಗಿಸಬೇಕೆಂದು ವಿನಂತಿಸಿದೆ. ನನಗೆ ಇದು ಸಾಮಾನ್ಯ ನಾಗರಿಕರ ಮತ್ತು ವಿಶೇಷವಾಗಿ ಹೆಣ್ಣುಮಕ್ಕಳ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ. " ಎಂದು ಟ್ವಿಟ್ ಮಾಡಿದ್ದಾರೆ.